ಮುಲ್ಕಿ:ಲಯನ್ಸ್ ಕ್ಲಬ್ ಆಶ್ರಯದಲ್ಲಿ ಕೆಎಸ್ ರಾವ್ ನಗರ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಮತ್ತು ಸರಕಾರಿ ಪ್ರೌಢ ಶಾಲೆಯಲ್ಲಿ ಎಲ್ ಸಿ ಐ ಎಸ್.ನ ಡಿಸಿಜಿ ಸೇವಾ ಅನುದಾನದ ಅಡಿಯಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಮದ್ಯಾಹ್ನದ ಬೋಜನ ,ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲ ಹರ್ಷರಾಜ್ ಶೆಟ್ಟಿ ಜಿ ಎಂ ವಹಿಸಿ ಮಾತನಾಡಿ ಮಕ್ಕಳ ಆರೋಗ್ಯ ಸುಧಾರಣೆಗೆ ಪೌಷ್ಟಿಕ ಆಹಾರ ಮುಖ್ಯವಾಗಿದ್ದು ಮಕ್ಕಳು ಶಾಲೆಯಲ್ಲಿ ಉತ್ತಮ ಶಿಕ್ಷಣದ ಜೊತೆಗೆ ಪರಿಸರ ಸ್ವಚ್ಛತೆ ಕಾಪಾಡಿಕೊಂಡು ಸಾಧಕರಾಗಬೇಕಾಗಿದೆ ಎಂದರು ಮುಖ್ಯ ಅತಿಥಿಗಳಾಗಿ ಲಯನ್ಸ್ ಜಿಲ್ಲಾ ಗ್ಲೋಬಲ್ ಸರ್ವಿಸ್ ಮುಖ್ಯಸ್ಥ ವೆಂಕಟೇಶ್ ಹೆಬ್ಬಾರ್, ಪದಾಧಿಕಾರಿಗಳಾದ ಶೀತಲ್ ಸುಶೀಲ್, ಸುಶೀಲ್ ಬಂಗೇರ, ಉದಯ ಅಮೀನ್, ಸದಾಶಿವ ಹೊಸದುರ್ಗ, ಮೋಹನದಾಸ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ಲತಾ ಶೇಖರ್ ಶೋಭಾ ಸುಜೀತ್ ಅರುಣಾ ಎಮ್, ಪ್ರತಿಭಾ ಹೆಬ್ಬಾರ್ , ಶಾಲಾ ಮುಖ್ಯೋಪಾಧ್ಯಾಯರು, ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

