ಮುಲ್ಕಿ: ಸಾಮಾಜಿಕ ಕಾರ್ಯಕರ್ತನಿಂದ ಕೆರೆಕಾಡು-ತೋಕೂರು ದೇವಸ್ಥಾನ ಸಂಪರ್ಕ ರಸ್ತೆ ತಾತ್ಕಾಲಿಕ ದುರಸ್ತಿ

0
120

ಮುಲ್ಕಿ: ಪಡುಪಣಂಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳಾಯರು ಗ್ರಾಮದ ತೋಕೂರು ದೇವಸ್ಥಾನ ಕೆರೆಕಾಡು ಸಂಪರ್ಕ ಕಾಂಕ್ರೀಟ್ ರಸ್ತೆ ಜಲಕದ ಕಟ್ಟೆ ಬಳಿ ಬಿರುಕು ಬಿಟ್ಟು ಹೊಂಡ ಉಂಟಾಗಿ ವಾಹನ ಸಂಚಾರ ದುಸ್ತರವಾಗಿ ಹಾಗೂ ಅಪಾಯಕಾರಿಯಾಗಿ ಪರಿಣಮಿಸಿತ್ತು.
ವಾಹನ ಸವಾರರ ತೊಂದರೆ ಗಮನಿಸಿ ಕಾರ್ಯಪ್ರವೃತ್ತರಾದ ಸಾಮಾಜಿಕ ಕಾರ್ಯಕರ್ತ ಧರ್ಮಾನಂದ ಶೆಟ್ಟಿಗಾರ್ ರವರು ಸ್ಥಳೀಯರ ಜೊತೆ ಸೇರಿ ಸಿಮೆಂಟ್ ಹಾಗೂ ಜಲ್ದಿ ಮಿಕ್ಸ್ ಮೂಲಕ ಕಾಂಕ್ರೀಟ್ ರಸ್ತೆಯ ಹೊಂಡಗಳನ್ನು ತಾತ್ಕಾಲಿಕವಾಗಿ ದುರಸ್ತಿ ಪಡಿಸಿ ಮಾದರಿಯಾಗಿದ್ದಾರೆ.
ಬಳಿಕ ಮಾಧ್ಯಮದೊಂದಿಗೆ ಧರ್ಮಾನಂದ ಶೆಟ್ಟಿಗಾರ್ ಮಾತನಾಡಿ, ಪಡುಪಣಂಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲಾಪು ಹೆದ್ದಾರಿ ಕ್ರಾಸ್ ,ದೇವಸ್ಥಾನದ ಬಳಿ ಸಹಿತ ಅನೇಕ ಕಡೆ ರಸ್ತೆ ಕೆಟ್ಟು ಹೋಗಿ ಸಾರ್ವಜನಿಕ ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು ತಾತ್ಕಾಲಿಕ ದುರಸ್ತಿಪಡಿಸಲು ಯೋಜನೆ ಕೈಗೊಳ್ಳಲಾಗಿದೆ ಎಂದರು.

LEAVE A REPLY

Please enter your comment!
Please enter your name here