ಯಾವುದೇ ಬಜೆಟ್ ಗೂ ಹೊಂದಿಕೆಯಾಗುವ ಉತ್ಕೃಷ್ಟ ತಂತ್ರಜ್ಞಾನ : ಅಮಿತ್ ಸಿಂಗಲ್
ಮಂಗಳೂರು : ಇಂದಿನ ಬದಲಾಗುತ್ತಿರುವ ಜಗತ್ತಿನಲ್ಲಿ ಗ್ರಾಹಕರು ಸುಂದರ, ಆಹ್ಲಾದಕರ ಹಾಗೂ ದೀರ್ಘಕಾಲ ಬಾಳಿಕೆ ಬರುವ ಮನೆಗಳನ್ನು ಬಯಸುತ್ತಿದ್ದಾರೆ. ಆದರೆ, ಕಡಿಮೆ ಬಜೆಟ್ ವಿಭಾಗದಲ್ಲಿ ಸೌಂದರ್ಯ, ಬಾಳಿಕೆ ಹಾಗೂ ಕೈಗೆಟುಕುವ ದರ ಇವೆಲ್ಲವನ್ನೂ ಒಟ್ಟಿಗೆ ನೀಡುವುದು ಕಂಪನಿಗಳಿಗೆ ದೊಡ್ಡ ಸವಾಲಾಗಿತ್ತು. ಅದರಲ್ಲೂ ವಿಶೇಷವಾಗಿ ಗೋಡೆಗಳು ಒಣಗಿದ ನಂತರ ಮೂಡುವ ನೀರಿನ ಕಲೆಗಳು ಸುಂದರವಾದ ಮನೆಯ ಅಂದವನ್ನು ಕೆಡಿಸುತ್ತಿದ್ದವು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ದೇಶದ ಪ್ರಮುಖ ಪೇಂಟ್ಸ್ ಸಂಸ್ಥೆಯಾದ ಏಷ್ಯನ್ ಪೇಂಟ್ಸ್, ತನ್ನ ಜನಪ್ರಿಯ ಉತ್ಪನ್ನಗಳಾದ ಏಸ್ ಮತ್ತು ಟ್ರ್ಯಾಕ್ಟರ್ ಎಮಲ್ಷನ್ ಗಳಲ್ಲಿ ಹೊಸ ಆಂಟಿ-ಡ್ಯಾಂಪ್ ತಂತ್ರಜ್ಞಾನವನ್ನು ಪರಿಚಯಿಸಿದೆ.
ಗ್ರಾಹಕರಿಗೆ ದೀರ್ಘಕಾಲದಲ್ಲಿ ಪ್ರಯೋಜನವನ್ನು ಒದಗಿಸುವ ನಿಟ್ಟಿನಲ್ಲಿ, ಕಂಪನಿಯು ಈ ಉತ್ಪನ್ನಗಳ ಮೇಲೆ 4 ವರ್ಷಗಳ ವಾರಂಟಿ ಘೋಷಿಸಿದೆ. ಇದು ಅಲ್ಪಾವಧಿಯ ವೆಚ್ಚದ ಆಲೋಚನೆಯನ್ನು ಬದಿಗಿಟ್ಟು, ದೀರ್ಘಕಾಲದ ಬಾಳಿಕೆ ಕಡೆಗೆ ಗ್ರಾಹಕರು ಗಮನಹರಿಸುವಂತೆ ಮಾಡಿದೆ.
ಈ ಕುರಿತು ಮಾತನಾಡಿರುವ ಏಷ್ಯನ್ ಪೇಂಟ್ಸ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಿತ್ ಸಿಂಗಲ್ ಮಾತನಾಡಿ, “ಭಾರತದಾದ್ಯಂತ ಗ್ರಾಹಕರ ನಿರೀಕ್ಷೆಗಳಲ್ಲಿ ಸ್ಪಷ್ಟ ಬದಲಾವಣೆ ಕಾಣಿಸುತ್ತಿದೆ. ಯಾವುದೇ ಬಜೆಟ್ ಇರಲಿ, ಕಾರ್ಯಕ್ಷಮತೆ ಮತ್ತು ಸೌಂದರ್ಯ ಎರಡಕ್ಕೂ ಗ್ರಾಹಕರು ಸಮಾನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಏಷ್ಯನ್ ಪೇಂಟ್ಸ್ ನಲ್ಲಿ ನಾವು ಇಂತಹ ಬದಲಾಗುತ್ತಿರುವ ಅಗತ್ಯಗಳನ್ನು ಮೊದಲೇ ಗುರುತಿಸಿ, ಹೊಸ ಆವಿಷ್ಕಾರಗಳನ್ನು ಎಲ್ಲರಿಗೂ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಟ್ರ್ಯಾಕ್ಟರ್ ಮತ್ತು ಏಸ್ ಎಮಲ್ಷನ್ ಗಳಲ್ಲಿ ಆಂಟಿ-ಡ್ಯಾಂಪ್ ತಂತ್ರಜ್ಞಾನವನ್ನು ತಂದಿದ್ದೇವೆ. ಇದು ಎಲ್ಲಾ ಬಜೆಟ್ ನವರಿಗೂ ಹೊಂದಿಕೆಯಾಗುವ ಉತ್ಕೃಷ್ಟ ಸೌಲಭ್ಯ ಒದಗಿಸಲಿದೆ” ಎಂದು ತಿಳಿಸಿದರು.
ಏಷ್ಯನ್ ಪೇಂಟ್ಸ್ ಸಂಸ್ಥೆಯ ಏಸ್ ಮತ್ತು ಟ್ರ್ಯಾಕ್ಟರ್ ಎಮಲ್ಷನ್ ಗಳು ಕಳೆದ ಹಲವು ವರ್ಷಗಳಿಂದ ಪೇಂಟಿಂಗ್ ಕಾಂಟ್ರಾಕ್ಟರ್ ಗಳು, ಡೀಲರ್ ಗಳು ಹಾಗೂ ಮನೆಮಾಲೀಕರ ನಡುವೆ ಅಪಾರ ವಿಶ್ವಾಸ ಗಳಿಸಿವೆ. ಮಾರುಕಟ್ಟೆಯ ನೈಜ ಅಗತ್ಯಗಳಿಗೆ ತಕ್ಕಂತೆ ಕಂಪನಿಯು ಈ ಹಿಂದೆಯೂ ಟ್ರ್ಯಾಕ್ಟರ್ ಮತ್ತು ಏಸ್ ಸ್ಪಾರ್ಕ್ ಹಾಗೂ ಟ್ರ್ಯಾಕ್ಟರ್ ಮತ್ತು ಏಸ್ ಶೈನ್ ಶ್ರೇಣಿಗಳನ್ನು ಪರಿಚಯಿಸಿ ಯಶಸ್ವಿಯಾಗಿತ್ತು.
ಈ ಹೊಸ ಆವಿಷ್ಕಾರವನ್ನು ಗ್ರಾಹಕರಿಗೆ ತಲುಪಿಸಲು ಮ್ಯಾಕ್ಕ್ಯಾನ್ ಇಂಡಿಯಾ ಸಂಸ್ಥೆಯು ಒಂದು ವಿಶಿಷ್ಟ ಮತ್ತು ಹಾಸ್ಯಭರಿತ ಜಾಹೀರಾತು ಅಭಿಯಾನವನ್ನು ರೂಪಿಸಿದೆ. ಈ ಜಾಹೀರಾತು ಚಿತ್ರದಲ್ಲಿ, ಮನೆಮಾಲೀಕನೊಬ್ಬ ತನ್ನ ಮನೆಗೆ ಬಂದ ಅತಿಥಿಯನ್ನು ಸತ್ಕರಿಸುವಾಗ, ಗೋಡೆಯ ಮೇಲಿನ ನೀರಿನ ಕಲೆಯು ಒಬ್ಬ ತುಂಟ ಪಾತ್ರದ ರೂಪದಲ್ಲಿ ಬಂದು ಪದೇ ಪದೇ ಅಡ್ಡಿಪಡಿಸುತ್ತದೆ. ಮನೆಮಾಲೀಕನು ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಿದರೂ, ಆ ನೀರಿನ ಕಲೆಯು ಮುಜುಗರ ತರುವಂತಹ ಸಂದರ್ಭಗಳಲ್ಲಿ ಮತ್ತೆ ಮತ್ತೆ ಪ್ರತ್ಯಕ್ಷವಾಗುತ್ತದೆ. ಗೋಡೆಗಳು ಒಣಗಿದ ನಂತರ ಮೂಡುವ ನೀರಿನ ಕಲೆಗಳಿಂದ ಎದುರಾಗುವ ದೈನಂದಿನ ಮುಜುಗರವನ್ನು ಈ ಕಥೆಯು ಅತ್ಯಂತ ಹಾಸ್ಯಭರಿತವಾಗಿ ಚಿತ್ರಿಸಿದೆ.
ಈ ಅಭಿಯಾನದ ಕುರಿತು ಮಾತನಾಡಿದ ಮ್ಯಾಕ್ಕ್ಯಾನ್ ಇಂಡಿಯಾದ ಸ್ಟ್ರಾಟಜಿ ಮುಖ್ಯಸ್ಥರಾದ ರಾಜೇಶ್ ಶರ್ಮಾ, “ನೀರಿನ ಕಲೆಗಳು ಕೇವಲ ಗೋಡೆಯ ಸಮಸ್ಯೆಯಾಗಿ ಉಳಿಯುವುದಿಲ್ಲ, ಅದು ತಮ್ಮ ಸ್ವಂತ ಮನೆಯ ಬಗ್ಗೆ ಅವರಿಗಿರುವ ಭಾವನೆಯನ್ನೇ ಕೆಡಿಸುತ್ತದೆ. ಅದನ್ನು ಈ ತಂತ್ರಜ್ಞಾನ ನಿವಾರಿಸಲಿದೆ ಎಂಬುದನ್ನು ತೋರಿಸಿದ್ದೇವೆ” ಎಂದರು.
ಈ ಮಹತ್ವದ ಬಿಡುಗಡೆ ಮೂಲಕ ಏಷ್ಯನ್ ಪೇಂಟ್ಸ್ ಸಂಸ್ಥೆಯು ಕಡಿಮೆ ವೆಚ್ಚದ ಪೇಂಟ್ ಮಾರುಕಟ್ಟೆಯ ನಿರೀಕ್ಷೆಗಳನ್ನು ಮರುಬ್ಯಾಖ್ಯಾನಿಸುತ್ತಿದೆ. ಕೈಗೆಟುಕುವ ದರ ಮತ್ತು ಅತ್ಯುತ್ತಮ ಕಾರ್ಯಕ್ಷಮತೆಯ ನಡುವಿನ ಕಂದಕವನ್ನು ಮುಚ್ಚುವ ಮೂಲಕ, ಸುಧಾರಿತ ಉತ್ಪನ್ನಗಳು ಪ್ರತಿಯೊಬ್ಬ ಮನೆಮಾಲೀಕನಿಗೂ ಲಭ್ಯವಾಗುವಂತೆ ಮಾಡುತ್ತಿದೆ.

