ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : 20ನೇ ವರ್ಷದ ಅಬ್ಬನಡ್ಕ ಗಣೇಶೋತ್ಸವ ಸಂಭ್ರಮದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ

0
18

ಕಾರ್ಕಳ : ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಮತ್ತು ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಜಂಟಿ ಆಶ್ರಯದಲ್ಲಿ ಜರಗಲಿರುವ 20ನೇ ವರ್ಷದ ಅಬ್ಬನಡ್ಕ ಗಣೇಶೋತ್ಸವ ಸಂಭ್ರಮದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ರಜತ ಮಹೋತ್ಸವ ಸಭಾಂಗಣದಲ್ಲಿ ಜರಗಿತು.

ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರಾದ ಸುರೇಶ್ ಅಬ್ಬನಡ್ಕ ಅವರು ಅಧ್ಯಕ್ಷತೆ ವಹಿಸಿದ್ದರು. ಸಂಘದ ಸ್ಥಾಪಕ ಅಧ್ಯಕ್ಷರಾದ ಇನ್ನ ವಿಠಲ ಮೂಲ್ಯ ಅವರು ಅಬ್ಬನಡ್ಕ ಗಣೇಶೋತ್ಸವ ಸಂಭ್ರಮದ ಪೋಸ್ಟರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಸಂಘದ ಪೂರ್ವಧ್ಯಕ್ಷರಾದ ಬೋಳ ರಘುವೀರ್ ಶೆಟ್ಟಿ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಂಘದ ಸಂಚಾಲಕರಾದ ಸಂದೀಪ್ ಪೂಜಾರಿ ಅಬ್ಬನಡ್ಕ, ಅಬ್ಬನಡ್ಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಪ್ರದೀಪ್ ಸುವರ್ಣ ಕೆಮ್ಮಣ್ಣು, ಸಂಘದ ಕಾರ್ಯದರ್ಶಿ ಸತೀಶ್ ಅಬ್ಬನಡ್ಕ, ಮಹಿಳಾ ಸಂಘಟನಾ ಕಾರ್ಯದರ್ಶಿ ಸುಲೋಚನ ಕೋಟ್ಯಾನ್, ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಸುಭಾಸ್ ಕುಮಾರ್ ಕೆಮ್ಮಣ್ಣು, ಸಂಘದ ಪೂರ್ವಧ್ಯಕ್ಷರುಗಳಾದ ಆನಂದ ಪೂಜಾರಿ, ಸುರೇಶ್ ಕಾಸರಬೈಲು, ಅಬ್ಬನಡ್ಕ ಭಜನಾ ಮಂಡಳಿಯ ಅಧ್ಯಕ್ಷರಾದ ಕೀರ್ತನ್ ಪೂಜಾರಿ, ಅಬ್ಬನಡ್ಕ ಶ್ರೀ ವನದುರ್ಗ ಸ್ವ-ಸಹಾಯ ಸಂಘದ ಅಧ್ಯಕ್ಷರಾದ ಪುಷ್ಪ ಕುಲಾಲ್, ಅಬ್ಬನಡ್ಕ ಚಂಡೆ ಬಳಗದ ನಿರ್ದೇಶಕರಾದ ಯೋಗೀಶ್ ಆಚಾರ್ಯ, ಅಬ್ಬನಡ್ಕ ಸಂಗೀತ ತಂಡದ ನಿರ್ದೇಶಕರಾದ ಪದ್ಮಶ್ರೀ ಪೂಜಾರಿ, ಸಹ ನಿರ್ದೇಶಕರಾದ ವೀಣಾ ಆಚಾರ್ಯ, ಸದಸ್ಯರಾದ ಲೀಲಾ ಪೂಜಾರಿ, ವೀಣಾ ಪೂಜಾರಿ, ಹರಿಣಿ ಪೂಜಾರಿ, ಹರೀಶ್ ಪೂಜಾರಿ, ಶಾಂತರಾಮ್ ಕುಲಾಲ್, ಬಾಲಕೃಷ್ಣ ಮಡಿವಾಳ, ಭಜನಾ ಮಂಡಳಿಯ ಕಾರ್ಯದರ್ಶಿ ಶ್ರದ್ಧಾ ಬೋಳ, ಅಬ್ಬನಡ್ಕ ಸಂಗೀತ ತಂಡದ ಸದಸ್ಯರಾದ ಆಶಾ ಆಚಾರ್ಯ ತ್ರಿವೇಣಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here