ಸಂಘಟನೆಯ ಮಹತ್ವ ಏನೆಂದು ಜಗಕ್ಕೆ ಸಾರಿದವರು ನಾರಾಯಣ ಗುರುಗಳು : ರಾಜೇಶ್ ಬಲ್ಯ

0
8

ಮಾಣಿ : ಬ್ರಹ್ಮಶ್ರೀ ನಾರಾಯಣ ಗುರುಗಳು ಅಂದಿನ ಕಾಲದಲ್ಲೇ ವಿದ್ಯೆ,ಸಂಘಟನೆ,ಸಾಮಾಜಿಕ ಬದ್ಧತೆಗೆ ಒತ್ತು ಕೊಟ್ಟವರು. ಧಾರ್ಮಿಕ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ತಂದವರು, ಎಲ್ಲರೂ ಒಂದೇ ಎನ್ನುವ ಭಾವನೆ ನಮ್ಮಲ್ಲಿ ಇರಬೇಕು, ಯಾರು ಕೀಳು ಮೇಲು ಎನ್ನದೇ ಬದುಕಬೇಕು ಎಂದು ಲೋಕಕ್ಕೆ ತಿಳಿಸಿದವರು. ಒಬ್ಬನೇ ಮಾಡದ ಕೆಲಸವನ್ನು ಒಂದು ಸಂಘಟನೆಯಿಂದ ಮಾಡಬಹುದು,ಸಂಘಟನೆಯಿಂದ ಸಮಾಜಕ್ಕೆ ಒಳಿತು ಆಗುವ ಕೆಲಸ ಮಾಡುವ ಶಕ್ತಿ ಇದೆ,ಎಲ್ಲರೂ ಒಟ್ಟಾಗಿ,ಒಂದೇ ಮನಸ್ಸಿನಿಂದ ಸಂಘಟನೆಯಲ್ಲಿ ಸೇವೆ ಮಾಡಿದರೆ ಉತ್ತಮ ಸಮಾಜ ರೂಪುಗೊಳ್ಳಲು ಸಹಕಾರವಾಗುತ್ತದೆ ಎಂದು ಸಾರಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದು ರಾಜೇಶ್ ಬಲ್ಯ ಹೇಳಿದರು. ಅವರು ಆಗಸ್ಟ್ 30 ಭಾನುವಾರ ಮಾಣಿ ಘಟಕದ ಸಮಾಜ ಸೇವಾ ನಿರ್ದೇಶಕ ಸುರೇಶ್ ಬಾಕಿಲ ಅವರ ಮನೆಯಲ್ಲಿ, ಯುವವಾಹಿನಿ(ರಿ.) ಮಾಣಿ ಘಟಕವು ಆಯೋಜಿಸಿರುವ “ಮನೆ ಮನೆಗೆ ಗುರುತತ್ವ ಸಂದೇಶ” ಕಾರ್ಯಕ್ರಮದಲ್ಲಿ. ಗುರು ಸಂದೇಶ ನೀಡಿ ಮಾತನಾಡಿದರು.

ಮಾಣಿ ಘಟಕದ ಅಧ್ಯಕ್ಷ ಗಣೇಶ್ ಕೊಡಾಜೆ ಮಾತನಾಡಿ, ಯುವವಾಹಿನಿ(ರಿ.) ಮಾಣಿ ಘಟಕವು ನಡೆಸಿಕೊಂಡು ಬರುತ್ತಿರುವ ಮನೆ ಮನೆಗೆ ಗುರುತತ್ವ ಸಂದೇಶವು,ಗುರುಗಳ ತತ್ವ, ಸಮಾಜದಲ್ಲಿ ಅವರು ಮಾಡಿದ ಸಾಮಾಜಿಕ ಕ್ರಾಂತಿ, ಜಗಕ್ಕೆ ಸಾರಿದ ಸಂದೇಶವನ್ನು ಪ್ರತಿ ಮನೆ ಹಾಗೂ ಮನಗಳಿಗೆ ಮುಟ್ಟಿಸುವ ಕೆಲಸವನ್ನು ಮಾಡುತ್ತಿದೆ,ಗುರುಗಳು ಎಲ್ಲಾ ಸಮಾಜದ ಗುರುಗಳು ಮತ್ತು ಅವರ ಜೀವನದ ಚರಿತ್ರೆಯನ್ನು ಎಲ್ಲರು ತಿಳಿಯುವುದು ಮತ್ತು ತಿಳಿಸುವುದರ ಬಗ್ಗೆ ನಾವೆಲ್ಲರೂ ಶ್ರಮಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಘಟಕದ ನಾರಾಯಣ ಗುರುತತ್ವ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕರಾದ ಶ್ರೀಧರ ಮುಜಲಾ, ಬ್ರಹ್ಮಶ್ರೀ ನಾರಾಯಣ ಗುರು ಸಭಾ ಭವನದ ಕಟ್ಟಡ ಸಮಿತಿಯ ಅಧ್ಯಕ್ಷ ನಾರಾಯಣ ಸಾಲ್ಯಾನ್, ಮಾಜಿ ಅಧ್ಯಕ್ಷರು,ಪದಾಧಿಕಾರಿಗಳು, ಊರಿನ ಗೌರವಾನ್ವಿತ ಸದಸ್ಯರು ಹಾಗೂ ಘಟಕದ ಸದಸ್ಯರು ಪಾಲ್ಗೊಂಡಿದ್ದರು.

ಕಾರ್ಯಕ್ರಮವನ್ನು ಘಟಕದ ಕಾರ್ಯದರ್ಶಿ ವಿಶ್ವನಾಥ ಪೂಜಾರಿ ದರ್ಖಾಸು ಸ್ವಾಗತಿಸಿ, ಡಾ. ತ್ರಿವೇಣಿ ರಮೇಶ್ ಮುಜಾಲ ವಂದಿಸಿದರು.