ಕರೂರು ವೈಶ್ಯ ಬ್ಯಾಂಕ್: ಉಡುಪಿ ಸೇರಿ 16 ಶಾಖೆಗಳ ಉದ್ಘಾಟನೆ

0
4

ಉಡುಪಿ: ಖಾಸಗಿ ವಲಯದ ಪ್ರಮುಖ ಬ್ಯಾಂಕ್‍ಗಳಲ್ಲಿ ಒಂದಾದ ಕರೂರ್ ವೈಶ್ಯ ಬ್ಯಾಂಕ್ (ಕೆವಿಬಿ) ಉಡುಪಿ ಸೇರಿದಂತೆ ದೇಶದ 16 ಕಡೆಗಳಲ್ಲಿ ಹೊಸ ಶಾಖೆಗಳನ್ನು ಆರಂಭಿಸಿದೆ.

ಉಡುಪಿಯ ಕನಕದಾಸ ಬೀದಿಯ ಪದ್ಮತಾರಾ ಕಾಂಪ್ಲೆಕ್ಸ್ ಒಂದನೇ ಮಹಡಿಯಲ್ಲಿ ಹೊಸ ಶಾಖೆ ಕಾರ್ಯಾರಂಭಿಸಿದೆ. ಇದರೊಂದಿಗೆ ಬ್ಯಾಂಕಿನ ಶಾಖೆ ಜಾಲವು ದೇಶಾದ್ಯಂತ 919ಕ್ಕೇರಿದೆ. ತಮಿಳುನಾಡಿನಲ್ಲಿ ಆರು, ಆಂಧ್ರಪ್ರದೇಶದಲ್ಲಿ ಐದು, ತೆಲಂಗಾಣದಲ್ಲಿ ಮೂರು, ಕರ್ನಾಟಕ ಮತ್ತು ದೆಹಲಿ ಎನ್‍ಸಿಆರ್‍ನಲ್ಲಿ ತಲಾ ಒಂದು ಶಾಖೆ ತೆರೆಯಲಾಗಿದೆ.

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಸಹ ಕುಲಪತಿ ಡಾ.ಎಚ್. ಎಸ್. ಬಲ್ಲಾಳ್ ಶಾಖೆಯನ್ನು ಉದ್ಘಾಟಿಸಿದರು. ಮಣಿಪಾಲ್ ಟೆಕ್ನಾಲಜೀಸ್ ಲಿಮಿಟೆಡ್ ಕಾರ್ಯನಿರ್ವಾಹಕ ಅಧ್ಯಕ್ಷರಾದ ಟಿ. ಗೌತಮ್ ಎಸ್. ಪೈ ಅವರು ಎಟಿಎಂ ಸೌಲಭ್ಯ ಉದ್ಘಾಟಿಸಿದರು. ಅಭರಣ್ ಜ್ಯುವೆಲ್ಲರ್ಸ್‍ನ ಸಂಧ್ಯಾ ಎಸ್. ಕಾಮತ್ ದೀಪ ಬೆಳಗಿದರು. ಕರೂರ್ ವೈಶ್ಯ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರಮೇಶ್ ಬಾಬು ವರ್ಚುವಲ್ ಆಗಿ ಶಾಖೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು ಎಂದು ಪ್ರಕಟಣೆ ಹೇಳಿದೆ.

ತನ್ನ ಶಾಖಾ ಸರಣಿಯ ಜೊತೆಗೆ, ಕೆವಿಬಿ ತನ್ನ ಡಿಜಿಟಲ್ ಬ್ಯಾಂಕಿಂಗ್ ಕೊಡುಗೆಗಳನ್ನು ಬಲಪಡಿಸುವುದನ್ನು ಮುಂದುವರಿಸಿದೆ. ಇದರ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್, ಕೆವಿಬಿ ಡಿಲೈಟ್, 150 ಕ್ಕೂ ಹೆಚ್ಚು ಹಣಕಾಸು ಮತ್ತು ಹಣಕಾಸೇತರ ಸೇವೆಗಳನ್ನು ನೀಡುತ್ತದೆ, ಗ್ರಾಹಕರು ತಮ್ಮ ಮೊಬೈಲ್ ಫೆÇೀನ್‍ಗಳ ಮೂಲಕ ವ್ಯಾಪಕ ಶ್ರೇಣಿಯ ಬ್ಯಾಂಕಿಂಗ್ ಸೇವೆಗಳಿಗೆ ಪ್ರವೇಶವನ್ನು ನೀಡುತ್ತದೆ ಎಂದು ತಿಳಿಸಿದೆ.