
ಬಂಟ್ವಾಳ : ಇಲ್ಲಿನ ನರಿಕೊಂಬು ಶ್ರೀ ವಿಜಯಲಕ್ಷ್ಮಿ ಯುವಕ ಸಂಘದ ವತಿಯಿಂದ ಪ್ರತೀ ವರ್ಷದಂತೆ ಪೊಳಲಿ ಮತ್ತು ಸುಂಕದಕಟ್ಟೆ ಸಹಿತ ಕಟೀಲು ಕ್ಷೇತ್ರಕ್ಕೆ ಉಚಿತ ಪುಣ್ಯಕ್ಷೇತ್ರ ದರ್ಶನ ಕಾರ್ಯಕ್ರಮ ಮಂಗಳವಾರ ನಡೆಯಿತು.
ಸಂಘದ ಅಧ್ಯಕ್ಷ ಪ್ರಸಾದ್ ಗಾಣಿಗ, ಸದಸ್ಯರಾದ ರಾಜೇಶ್ ನಿರ್ಮಲ್, ಕೃಷ್ಣಪ್ಪ ಅಂತರ, ಉಮೇಶ್ ಟೈಲರ್, ಪ್ರೇಮನಾಥ ಶೆಟ್ಟಿ, ಜಗದೀಶ್ ಬೋರುಗುಡ್ಡೆ, ಹರೀಶ್ ಟೈಲರ್, ಸವಿತಾ ಉಷಾ, ವೀಣಾ ಮತ್ತಿತರ 50 ಮಂದಿ ಭಕ್ತರು ಭಜನಾ ಸಂಕೀರ್ತನೆಯೊಂದಿಗೆ ಪಾಲ್ಗೊಂಡರು.
