ಬೆಳ್ತಂಗಡಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೋಳಿ ಸಾಕಾಣಿಕೆ ರೈತರ ಹಿತರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟದ ಮಹತ್ವದ ಸಭೆಯು ಬೆಳ್ತಂಗಡಿಯ ಶ್ರೀ ಗುರು ನಾರಾಯಣ ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ ಒಕ್ಕೂಟದ ಕೇಂದ್ರ ಸಮಿತಿಯ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಕೋಳಿ ಸಾಕಾಣಿಕೆದಾರರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು. ರೈತರಿಗೆ ಆಗುತ್ತಿರುವ ತೊಂದರೆಗಳನ್ನು ನಿವಾರಿಸಲು ಸಂಬಂಧಪಟ್ಟ ಕಂಪನಿಗಳ ಮಾಲೀಕರು ಹಾಗೂ ಸರ್ಕಾರಿ ಅಧಿಕಾರಿಗಳೊಂದಿಗೆ ಮುಕ್ತ ಮಾತುಕತೆ ನಡೆಸಿ ಶಾಶ್ವತ ಪರಿಹಾರ ಕಂಡುಕೊಳ್ಳುವ ಬಗ್ಗೆ ಒಕ್ಕೊರಲಿನ ನಿರ್ಣಯ ಕೈಗೊಳ್ಳಲಾಯಿತು.
ನೂತನ ಸಮಿತಿಯು ರೈತರ ಹಕ್ಕುಗಳ ರಕ್ಷಣೆ, ಸಮಸ್ಯೆಗಳ ಪರಿಹಾರ ಹಾಗೂ ಕೋಳಿ ಸಾಕಾಣಿಕೆ ಕ್ಷೇತ್ರದ ಅಭಿವೃದ್ಧಿಗೆ ಬದ್ಧತೆಯಿಂದ ಕಾರ್ಯನಿರ್ವಹಿಸುವುದಾಗಿ ತಿಳಿಸಿದೆ.
ನೂತನ ಪದಾಧಿಕಾರಿಗಳ ಪಟ್ಟಿ:
🔹 ಅಧ್ಯಕ್ಷರು: ಸೈಯದ್ ಹಸನ್
🔹 ಉಪಾಧ್ಯಕ್ಷರು: ಕೂಸಪ್ಪ ಶೆಟ್ಟಿ, ಪ್ರದೀಪ್ ಕುಮಾರ್ ವಾಲ್ಪಡಿ, ಪ್ರಕಾಶ್ ರಾಮಕುಂಜ
🔹 ಪ್ರಧಾನ ಕಾರ್ಯದರ್ಶಿ: ಅಶ್ವಿನ್ ಕುಮಾರ್ ಬಿ.ಕೆ.
🔹 ಜೊತೆ ಕಾರ್ಯದರ್ಶಿಗಳು: ಜಯರಾಮ್ ಶೆಟ್ಟಿ, ಅಶ್ವಿನಿ ಬಿ.
🔹 ಕೋಶಾಧಿಕಾರಿ: ಕೇಶವ ಕೊಯ್ಯುರು
🔹 ಸಂಘಟನಾ ಕಾರ್ಯದರ್ಶಿಗಳು: ಸುರೇಂದ್ರ ಬೆದ್ರ, ರಿತೇಶ್ ಸ್ಟ್ರೆಲ್ಲಾ ಕೊಕ್ಕಡ, ರಾಜೇಶ್ ಸುವರ್ಣ ನೈನಾಡು, ಅಬ್ದುಲ್ ಅಜೀಜ್, ರವೀಂದ್ರ ಕಾಂಚನ ಪುತ್ತೂರು
🔹 ಕಾರ್ಯಕಾರಿ ಸಮಿತಿ ಸದಸ್ಯರು: ಸೂರಜ್ ಬೆದ್ರ, ರಾಜೇಶ್ ಪಟ್ರಮೆ, ದಾಮೋದರ ವಗ್ಗ, ಮೋಹನ್ ದಾಸ್ ಶೆಟ್ಟಿ ಕಡಬ, ಹರಿಪ್ರಸಾದ್ ಹೆಡ್ಯ, ರವಿ ಕಾಶಿಪಟ್ನ, ಪ್ರಸಾದ್ ರೈ ಹಾಗೂ ಲಾರೆನ್ಸ್ ಎಂ.ಆರ್. ಚಿಬಿದ್ರೆ.
ಸಭೆಯಲ್ಲಿ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಸಂಘಟಿತ ಹೋರಾಟ ಹಾಗೂ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವ ಅಗತ್ಯವನ್ನು ಒತ್ತಿ ಹೇಳಲಾಯಿತು. ನೂತನ ಸಮಿತಿಗೆ ಸದಸ್ಯರು ಶುಭ ಹಾರೈಸಿದ್ದು, ರೈತರ ಹಿತಾಸಕ್ತಿಗೆ ಪೂರಕವಾದ ಕಾರ್ಯಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ನಡೆಯುವ ವಿಶ್ವಾಸ ವ್ಯಕ್ತಪಡಿಸಿದರು.

