ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಸುಲ್ಕೆರಿಮೊಗ್ರು ರಿಕ್ಷಾ ಚಾಲಕ-ಮಾಲಕರ ಸಂಘದ ಸಭೆಯು ಮಹಿಷಮರ್ದಿನಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಮುಂದಿನ ಅವಧಿಗೆ ರಿಕ್ಷಾ ಪಾರ್ಕಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಂಘದ ನೂತನ ಅಧ್ಯಕ್ಷರಾಗಿ ರಾಜೇಶ್ ಕುಲಾಲ್ ಬೈರೊಟ್ಟು, ಕಾರ್ಯದರ್ಶಿಯಾಗಿ ನವೀನ್ ಸಾಲಿಯಾನ್ ಪಲ್ಧಿಮನೆ, ಕೋಶಾಧಿಕಾರಿಯಾಗಿ ಧೀರಜ್ ದೇವಾಡಿಗ ಆಯ್ಕೆಯಾದರು. ಇದರೊಂದಿಗೆ ವಿವಿಧ ಹುದ್ದೆಗಳಿಗೆ ಇತರ ಪದಾಧಿಕಾರಿಗಳನ್ನೂ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

