ಮೂಲ್ಕಿಯಲ್ಲಿ ಶೀಘ್ರದಲ್ಲೇ ಯಕ್ಷಗಾನ ನಾಟ್ಯ ತರಗತಿ ಆರಂಭ

0
7

ಮೂಲ್ಕಿ: ಯಕ್ಷಗಾನ ಕಲೆಯ ಬಗ್ಗೆ ಆಸಕ್ತಿ ಹೊಂದಿರುವ 6 ವರ್ಷ ಮೇಲ್ಪಟ್ಟ ಮಕ್ಕಳಿಗೆ ಹಾಗೂ ಹಿರಿಯರಿಗೆ ಯಕ್ಷಗಾನ ನಾಟ್ಯ ಕಲಿಯುವ ಅಪೂರ್ವ ಅವಕಾಶ ಲಭ್ಯವಾಗುತ್ತಿದೆ. ಮೂಲ್ಕಿಯ ವಿಜಯಾ ಕಾಲೇಜಿನಲ್ಲಿ ಪ್ರತಿ ಶನಿವಾರ ಸಂಜೆ 3 ಗಂಟೆಯಿಂದ ಯಕ್ಷಗಾನ ನಾಟ್ಯ ತರಗತಿಗಳು ಆರಂಭವಾಗಲಿವೆ.

ಹಿರಿಯ ಯಕ್ಷಗಾನ ಕಲಾವಿದ ಹಾಗೂ ಪ್ರಸಂಗಕರ್ತರಾದ ಡಾ. ತಾರಾನಾಥ ವರ್ಕಾಡಿ ಅವರು ತರಬೇತಿಯನ್ನು ನೀಡಲಿದ್ದಾರೆ.

ಆಸಕ್ತರು ಜಾಹೀರಾತಿನಲ್ಲಿರುವ QR ಕೋಡ್ ಅನ್ನು ಸ್ಕ್ಯಾನ್ ಮಾಡಿ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 7026106301 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಆಯೋಜಕರು ತಿಳಿಸಿದ್ದಾರೆ.