ಉಜಿರೆ: ಆಪ್ತಾಸ್ ಆಯುರ್ವೇದ ಟ್ರಸ್ಟ್ನ ದಶಮಾನೋತ್ಸವದ ಅಂಗವಾಗಿ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಅ. 29 ಮತ್ತು 30ರಂದು (ಶನಿವಾರ ಮತ್ತು ಭಾನುವಾರ) ಇಂದ್ರಿಯ ಆರೋಗ್ಯದ ಬಗ್ಯೆ ಅಂತಾರಾಷ್ಟಿçÃಯ ಸಮಾವೇಶ “ಪುನರ್ವಸು” ಆಯೋಜಿಸಲಾಗಿದೆ.
ಅ. 29 ರಂದು ಶನಿವಾರ ಪೂರ್ವಾಹ್ನ ಗಂಟೆ 9.30ಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ “ಪುನರ್ವಸು” ಸಮಾವೇಶ ಉದ್ಘಾಟಿಸುವರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು.
ಆಯುಷ್ ಸಚಿವಾಲಯದ ಸಲಹೆಗಾರ ಕೌಸ್ತುಭ ಉಪಾಧ್ಯಾಯ, ಮನೀಷಾ ಕೋಟೆಕಾರ್, ಆಯುಷ್ ಇಲಾಖೆಯ ಆಯುಕ್ತ ಡಾ. ಸುನಿಲ್ ಪನ್ವಾರ್ ಮುಖ್ಯ ಅತಿಥಿಗಳಾಗಿ ಶುಭಾಶಂಸನೆ ಮಾಡುವರು.
ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್, ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮತ್ತು ಎಸ್.ಡಿ.ಎಂ. ಆಯುರ್ವೇದ ಸಂಸ್ಥೆಗಳ ನಿರ್ದೇಶಕ ಡಾ. ಪ್ರಸನ್ನ ಎನ್. ರಾವ್ ಗೌರವ ಉಪಸ್ಥಿತರಿರುವರು.
ಅ. 30 ರಂದು ಭಾನುವಾರ ಸಂಜೆ 4 ಗಂಟೆಗೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು: ಅ. 29 ರಂದು ಶನಿವಾರ ಸಂಜೆ ಏಳು ಗಂಟೆಯಿAದ ಆಳ್ವಾಸ್ ಸಾಂಸ್ಕೃತಿಕ ವೈಭವ ಪ್ರದರ್ಶನವಿದೆ. ಅ. 30 ರಂದು ಭಾನುವಾರ ಸಂಜೆ ಏಳು ಗಂಟೆಯಿAದ ಆಯುರ್ವೇದ ದಿನಚರಿ ಆಧಾರಿತ ಇಂದ್ರಿಯ ಆರೋಗ್ಯ ಅಭ್ಯಾಸಗಳ ಪ್ರಾತ್ಯಕ್ಷಿಕೆ ನಡೆಯಲಿದೆ.
