ಶ್ರೀ ಮಹಾಲಿಂಗೇಶ್ವರ ದೇವರಿಗೆ ನೂತನ ಧ್ವಜಮರ ಸಮರ್ಪಣೆ : ಇಂದು (ಅ.30) ವೈಭವದ ಮೆರವಣಿಗೆ

0
28

ಕಳತ್ತೂರು : ಶ್ರೀ ಕ್ಷೇತ್ರ ಕಳತ್ತೂರಿನ ಗ್ರಾಮ ದೇವರಾದ ಶ್ರೀ ಮಹಾಲಿಂಗೇಶ್ವರ ದೇವರಿಗೆ ನೂತನ ಧ್ವಜಮರ ಸಮರ್ಪಣೆಯ ಅಂಗವಾಗಿ ಇಂದು (ಅ.30) ವೈಭವದ ಮೆರವಣಿಗೆ ನಡೆಯಲಿದೆ.

ಸಂಜೆ 4 ಗಂಟೆಗೆ ವಿವಿಧ ವಾದ್ಯಘೋಷಗಳು ಹಾಗೂ ಭಜನಾ ತಂಡಗಳ ಸಹಭಾಗಿತ್ವದಲ್ಲಿ ಶಾಂತಿಗುಡ್ಡೆ ಸರ್ಕಲ್‌ನಿಂದ ಶ್ರೀ ದೇವಳದವರೆಗೆ ನೂತನ ಧ್ವಜಮರದ ಸಮರ್ಪಣಾ ಮೆರವಣಿಗೆ ನಡೆಯಲಿದೆ.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಮೂರು ಗ್ರಾಮದ ಸಂಘ-ಸಂಸ್ಥೆಗಳ ಸದಸ್ಯರು, ಭಜನಾ ಮಂಡಳಿಗಳ ಸದಸ್ಯರು, ಸ್ವಸಹಾಯ ಗುಂಪುಗಳ ಸದಸ್ಯರು ಹಾಗೂ ಗ್ರಾಮದ ಸಮಸ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಮನವಿ ಮಾಡಿದೆ.

ಮೆರವಣಿಗೆಯ ಸಿದ್ಧತೆಗಾಗಿ ಭಕ್ತಾದಿಗಳು ಸಂಜೆ 3.30ಕ್ಕೆ ಶಾಂತಿಗುಡ್ಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಆಗಮಿಸಿ, ಮೆರವಣಿಗೆಯ ಕಳಸ ಸಿದ್ಧಪಡಿಸುವ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಲಾಗಿದೆ.

ಎಲ್ಲಾ ಭಕ್ತಾದಿಗಳು ಈ ಪುಣ್ಯಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿ ಶ್ರೀ ಮಹಾಲಿಂಗೇಶ್ವರ ದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕೆಂದು ಶ್ರೀ ಕ್ಷೇತ್ರ ಕಳತ್ತೂರಿನ ಆಡಳಿತ ಮಂಡಳಿ ಭಕ್ತಿಪೂರ್ವಕವಾಗಿ ಕೋರಿದೆ.