ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕೇರಳದ ಗಡಿನಾಡ ಕಲಾಕುಂಚ ಶಾಖೆಯಿಂದ ನವರಾತ್ರಿ ಹಬ್ಬದ ಪ್ರಯುಕ್ತ ಐಲ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ವೀಣಾವಾದನ, ಶಾಸ್ತ್ರೀಯ ಸಂಗೀತ ಹಾಗೂ ಐಗಿರಿ ನಂದಿನಿ ಸ್ತೋತ್ರ ಸೇವೆ ಯಶಸ್ವಿಯಾಯಿತು ಎಂದು ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದರು.
ನವರಾತ್ರಿ ಹಬ್ಬದ ಪರವಾಗಿ ಕೇರಳದ ಗಡಿನಾಡ ಕಲಾಕುಂಚ ಶಾಖೆಯಿಂದ ಐಗಿರಿ ನಂದಿನಿ ಸ್ತೋತ್ರ, ಶಾಸ್ತ್ರೀಯ ಸಂಗೀತದಲ್ಲಿ ಮಂಗಲ್ಪಾಡಿಯ ವಿದುಷಿ ದಿವ್ಯಾ ಚಂದನ್ ಕಾರಂತ್, ಮೀಯಪದವುನ ರಾಧಾಮಣಿರಾವ್, ಪುತ್ತೂರಿನ ಸುಮನ್ರಾವ್, ಪಿಟೀಲಿನಲ್ಲಿ ಸುಪ್ರಜಾರಾವ್ ಮುಂತಾದವರು ಈ ಸಂಗೀತ ಪರಂಪರೆಯ ಸಮಾರಂಭ ಸುಸಂಪನ್ನಗೊಂಡಿತು.
ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಗೌರವ ಅಧ್ಯಕ್ಷರಾದ ಜಯಲಕ್ಷ್ಮಿ ಶ್ರೀರಾಮ ಕಾರಂತ್ ರವರು ಉಪಸ್ಥಿತರಿದ್ದರು.

