ಹಳೆಯಂಗಡಿ : ರೈಲಿನಡಿಗೆ ಬಿದ್ದು ವ್ಯಕ್ತಿ ಸಾವು..!

0
183

ಅಪಘಾತದ ಸ್ಥಳದಲ್ಲಿ ಮುಕ್ಕಾಲು ಗಂಟೆ ನಿಂತ ರೈಲು; ಮಾನವಿಯತೆ ಮೆರೆದ ರೈಲು ಚಾಲಕ

ಮುಲ್ಕಿ : ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿ ಸಮೀಪದ ಕೊಪ್ಪಲ ರೈಲ್ವೇ ಗೇಟ್ ಬಳಿ ವ್ಯಕ್ತಿಯೊಬ್ಬ ರೈಲಿನಡಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಸಾವನ್ನಪ್ಪಿದ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ.

ಭಾನುವಾರ ಮಧ್ಯಾಹ್ನ 3 ಗಂಟೆಗೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿರುವ ರೈಲು ಹಳೆಯಂಗಡಿ ಸಮೀಪದ ಕೊಪ್ಪಲ ರೈಲ್ವೇ ಗೇಟ್ ತಲುಪುತ್ತಿದ್ದಂತೆ ಸುಮಾರು 55 ವರ್ಷ ಪ್ರಾಯದ ವ್ಯಕ್ತಿ ಯೋರ್ವ ರೈಲಿನಡಿಗೆ ಬಿದ್ದಿದ್ದಾನೆ.

ಅಪಘಾತದ ನಡೆದ ಬಗ್ಗೆ ರೈಲು ಚಾಲಕನಿಗೆ ಕೂಡಲೇ ತಿಳಿದು ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಇನ್ನೊಂದು ರೈಲಿನ ಚಾಲಕನಿಗೆ ಮಾಹಿತಿ ನೀಡಿದ್ದು ಅದರ ಚಾಲಕ ರೈಲನ್ನು ಸುಮಾರು ಮುಕ್ಕಾಲು ಗಂಟೆ ಹೊತ್ತು ಅಪಘಾತ ನಡೆದ ನಿಲ್ಲಿಸಿ ರೈಲ್ವೇ ಹಳಿಯ ಮಧ್ಯದಲ್ಲಿ ಛಿದ್ರವಾಗಿದ್ದ ವ್ಯಕ್ತಿಯ ಶವವನ್ನು ಸ್ವತಃ ರೈಲು ಚಾಲಕ ಮತ್ತು ಸ್ಥಳೀಯ ಗ್ಯಾಂಗ್ ಮೆನ್ ರವರು ತೆಗೆದು ರೈಲ್ವೇ ಹಳಿಯ ಬದಿಯಲ್ಲಿ ಇರಿಸಿ ಮಾನವೀಯತೆ ಮೆರೆದಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ಅಪಘಾತದ ತೀವ್ರತೆಗೆ ಮೃತ ವ್ಯಕ್ತಿಯ ಮುಖ ಜಜ್ಜಿ ಹೋಗಿದ್ದು ದೇಹ ಗುರುತು ಪತ್ತೆಯಾದ ಸ್ಥಿತಿಯಲ್ಲಿದೆ. ಸ್ಥಳಕ್ಕೆ ಮುಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

LEAVE A REPLY

Please enter your comment!
Please enter your name here