
ಮೂಡುಬಿದಿರೆ :ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಕಡಂದಲೆ–ಪಾಲಡ್ಕ ಇವರ ಆಶ್ರಯದಲ್ಲಿ ಆಟಿಡೊಂಜಿ ದಿನ ಪನ್ಪಿನ ಪೊರ್ಲು ಲೇಸ್ ಕಾರ್ಯಕ್ರಮವು 26-07-2026, ಭಾನುವಾರ ನಡೆಯಲಿದೆ.
ತುಳುನಾಡಿನ ಆಟಿ ತಿಂಗಳ ಮಹತ್ವ
ತುಳುನಾಡಿನಲ್ಲಿ ಆಟಿ ವರ್ಷದ ಅತ್ಯಂತ ವಿಶೇಷ ಹಾಗೂ ಸಾಂಸ್ಕೃತಿಕ ಮಹತ್ವವುಳ್ಳ ತಿಂಗಳಾಗಿದೆ. ಈ ತಿಂಗಳಲ್ಲಿ ಪ್ರಕೃತಿಗೆ ಗೌರವ ಸಲ್ಲಿಸುವುದು, ದೇವರ ಆರಾಧನೆ, ಆರೋಗ್ಯಕರ ಆಹಾರ ಪದ್ಧತಿ, ಔಷಧೀಯ ಸಸ್ಯಗಳ ಬಳಕೆ ಮತ್ತು ಕುಟುಂಬದ ಸದಸ್ಯರು ಒಟ್ಟಾಗಿ ಸೇರಿ ಸಂಪ್ರದಾಯಗಳನ್ನು ಆಚರಿಸುವುದು ರೂಢಿಯಾಗಿದೆ.
ಆಟಿ ತಿಂಗಳು ನಮ್ಮ ಪೂರ್ವಜರ ಸಂಸ್ಕೃತಿ, ಜನಪದ ಆಚರಣೆಗಳು ಹಾಗೂ ಒಗ್ಗಟ್ಟಿನ ಜೀವನ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಪವಿತ್ರ ಕಾಲವಾಗಿದೆ. ಈ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ನಮ್ಮ ಸಂಘವು ಆಟಿಡೊಂಜಿ ದಿನ ಪನ್ಪಿನ ಪೊರ್ಲು ಲೇಸ್ ಕಾರ್ಯಕ್ರಮವನ್ನು ಆಯೋಜಿಸಿದೆ.
ಕಾರ್ಯಕ್ರಮದ ವೇಳಾಪಟ್ಟಿ
ಬೆಳಗ್ಗೆ 8.30 ರಿಂದ 9.30 – ಭಜನೆ ಹಾಗೂ ತಿಂಡಿ ವ್ಯವಸ್ಥೆ.
10.00 ರಿಂದ 12.00 – ವಿವಿಧ ಆಟೋಟಗಳು ಮತ್ತು ಮನರಂಜನಾ ಸ್ಪರ್ಧೆಗಳು.
12.30 ರಿಂದ 1.00 – ಸಭಾ ಕಾರ್ಯಕ್ರಮ, ಸನ್ಮಾನ ಹಾಗೂ ಬಹುಮಾನ ವಿತರಣೆ.
ಮಧ್ಯಾಹ್ನ 1.00 ಗಂಟೆಗೆ – ವನಸ್ (ಊಟ) ವ್ಯವಸ್ಥೆ.
ಊಟ ಆದ ನಂತರ ಸಂಘದ ಆವರಣದಲ್ಲಿ ಇಂಟರ್‌ಲಾಕ್ ಅಳವಡಿಸುವ (ಗೆಪ್ಪುನು) ಕೆಲಸ ಇರುವುದರಿಂದ, ಎಲ್ಲಾ ಸದಸ್ಯರು ಹಾಗೂ ಊರಿನವರು ತಮ್ಮ ಅಮೂಲ್ಯ ಸಹಕಾರ ನೀಡುವಂತೆ ವಿನಂತಿಸಿಕೊಳ್ಳುತ್ತೇವೆ.
ಆದ್ದರಿಂದ, ಆಟಿಡೊಂಜಿ ದಿನ ಪನ್ಪಿನ ಪೊರ್ಲು ಲೇಸ್ ಕಾರ್ಯಕ್ರಮಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ, ನಮ್ಮ ತುಳುನಾಡಿನ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಸಂಭ್ರಮದಿಂದ ಆಚರಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಪ್ರೀತಿಪೂರ್ವಕವಾಗಿ ವಿನಂತಿಸಿದ್ದಾರೆ.
