ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವಿವಿಧ ಕಾಯಿಲೆಯಿಂದ ಬಳಲುವ 9 ಜನ ಅರ್ಜಿದಾರರಿಗೆ ರೂ.4,44,025/- ( ರೂಪಾಯಿ ನಾಲ್ಕು ಲಕ್ಷದ ನಲವತ್ತಾಲ್ಕು ಸಾವಿರದ ಇಪ್ಪತ್ತೈದು ) ಪರಿಹಾರ ಧನ ರ‍್ಜಿದಾರರ ಖಾತೆಗೆ ಬಿಡುಗಡೆ.
ವಿವಿಧ ಕಾಯಿಲೆಗಳಿಂದ ಬಳಲುವ ಅರ್ಜಿದಾರರಿಗೆ ಕರ್ನಾಟಕ ರಾಜ್ಯದ ಮಾನ್ಯಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಾನ್ಯ ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ ರವರ ಮನವಿಯ ಮೇರೆಗೆ, ನಾರಾಯಣ ಕುಲಶೇಖರ ಇವರಿಗೆ ರೂ.1,17,434/-, ನಿಶ್ಚಲ್ ಮಂಗಳೂರು ಇವರಿಗೆ ರೂ.1,10,000/-, ಎಂ. ಅಬ್ದುಲ್ ಖಾದರ್ ಮಂಗಳೂರು ಇವರಿಗೆ ರೂ.59,066/-, ಇಬ್ರಾಹಿಂ ಸಜಿಪನಡು ಇವರಿಗೆ ರೂ.45,000/- ಉಸ್ಮಾನ್ ಮೂಡಬಿದ್ರಿ ಇವರಿಗೆ 41,021/-, ಎಂ. ಅಬುಬಕ್ಕರ್ ಇವರಿಗೆ ರೂ.22,041/-, ಅಬ್ದುಲ್ ರಜಾಕ್ ಕುದ್ರೋಳೀ ಇವರಿಗೆ ರೂ.18,476/-, ಲಾರೆನ್ಸ್ ಲೋಬೋ ಜೆಪ್ಪಿನಮೊಗರು ಇವರಿಗೆ ರೂ.17,987/-, ಅಹಮ್ಮದ್ ಬಾವಾ ಅಡ್ಡೂರು ಇವರಿಗೆ ರೂ.13,000/-
ಪರಿಹಾರ ಧನದ ಬಿಡುಗಡೆ ಪತ್ರವನ್ನು ಮಹಾನಗರ ಪಾಲಿಕೆ ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರ ಕಛೇರಿಯಲ್ಲಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ ಹಾಗೂ ಮೊಹಮ್ಮದ್ ಅಶ್ರಫ್, ಗೇರು ನಿಗಮದ ಅಧ್ಯಕ್ಷರು ಮಮತಾ ಗಟ್ಟಿ, ಮಂಗಳೂರು ತಾಲೂಕ್ ಗ್ಯಾರಂಟಿ ಸಮಿತಿಯ ಅಧ್ಯಕ್ಷರು ಸುರೇಂದ್ರ ಕಂಬಳಿ, ಮಾಜಿ ಕರ‍್ಪೋರೇಟರ್ ಅಪ್ಪಿ ಲತಾ, ನಾಗೇಂದ್ರ ಕುಮಾರ್, ಬಾಸ್ಕರ್ ರಾವ್, ಸತೀಶ್ ಪೆಂಗಲ್, ಕಾಂಗ್ರೆಸ್ ಪಕ್ಷದ ನಾಯಕರಾದ ಮನುರಾಜ್ ಎನ್.ಪಿ, ಇಮ್ರಾನ್, ನೀತು ಡಿಸೋಜಾ, ಪ್ರವೀಣ್ ಜೇಮ್ಸ್ ಉಪಸ್ಥಿತರಿದ್ದರು.

