ಕುಲಾಲ ಸಂಘ ಮುಂಬೈ ಮಹಿಳಾ ವಿಭಾಗದ ಆಶ್ರಯದಲ್ಲಿ”ನಮ್ಮ ಸಂಸ್ಕೃತಿ “(ತುಳುವೆರೆ ಆಯನ) ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

0
61

ಮುಂಬಯಿ:ಕುಲಾಲ ಸಂಘ ಮುಂಬೈ ಮಹಿಳಾ ವಿಭಾಗದ ಆಶ್ರಯದಲ್ಲಿ.”ನಮ್ಮ ಸಂಸ್ಕೃತಿ “(.ತುಳುವೆರೆ ಆಯನ) ) ಎಂಬ ಕಾರ್ಯಕ್ರಮ ಸೆ 20ರಂದು ದಾದರ್ ಪೂರ್ವದ ಸೆಂಟ್ ಜಾರ್ಜ್ ಆಡಿಟೋರಿಯಂ ನಲ್ಲಿ ಬೆಳಿಗ್ಗೆ 9 ರಿಂದ ಸಂಜೆ 6ರವರೆಗೆ ನಡೆಯಲಿದೆ.
ಈ ಬಗ್ಗೆ ಆಮಂತ್ರಣ ಪತ್ರಿಕೆಯು ಸೆ 9ರಂದು ಕುಲಾಲ ಸಂಘದ ಕೇಂದ್ರ ಕಚೇರಿಯಲ್ಲಿ ಸಂಘದ ಅಧ್ಯಕ್ಷ ರಘು ಎ ಮೂಲ್ಯ ಪಾದೆ ಬೆಟ್ಟು ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಸಂಘದ ಮಹಿಳಾ ವಿಭಾಗ ಹಾಗೂ ಐದು ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಸದಸ್ಯರು ಈ ಕಾರ್ಯಕ್ರಮದ ಮೂಲಕ ತಮ್ಮ ಕಲಾ ಪ್ರತಿಭೆಗಳನ್ನು ಅನಾವರಣಗೊಳಿಸಲಿದ್ದಾರೆ. ಅದಕ್ಕೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕರಿಸಬೇಕು ಎಂದು ನುಡಿದರು.
ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಸುಚಿತ್ ಡಿ ಬಂಜನ ಮಾತನಾಡಿ ದಿನಪೂರ್ತಿ ನಡೆಯುವ ಕಾರ್ಯಕ್ರಮದಲ್ಲಿ ತುಳುನಾಡಿನ ಸಂಸ್ಕೃತಿಯನ್ನು ವೈಭವಿಸುವ ನೃತ್ಯ ನಾಟಕ ಸ್ಪರ್ಧೆ. ಹಿರಿಯ ನಾಗರಿಕರಿಗೆ ಗೌರವ ಅರ್ಪಣೆ. ಹಾಗೂ ವಿಶೇಷ ನೃತ್ಯ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ದೇವದಾಸ್ ಎಲ್ ಕುಲಾಲ್. ಉಪಾಧ್ಯಕ್ಷರಾದ ಡಿ ಐ ಮೂಲ್ಯ. ಕಾರ್ಯದರ್ಶಿ ಕರುಣಾಕರ್ ಸಾಲಿಯನ್. ಕೋಶಾಧಿಕಾರಿ ಜಯ ಅಂಚನ್. ಮತ್ತಿತರ ಪದಾಧಿಕಾರಿಗಳು ಮಹಿಳಾ ವಿಭಾಗದ ಕಾರ್ಯದರ್ಶಿ ನಯನ್ ಎನ್ ಬಂಗೇರ. ಕೋಶಾಧಿಕಾರಿ ಲತಾ ಎಸ್ ಮೂಲ್ಯ. ಜೊತೆ ಕಾರ್ಯದರ್ಶಿ ಆರತಿ ಕೆ ಸಾಲ್ಯಾನ್. ಜೊತೆ ಕೋಶಾಧಿಕಾರಿ ಚಂದ್ರಾವತಿ ಎಸ್ ಸಾಲ್ಯಾನ್ . ಮತ್ತಿತರ ಪದಾಧಿಕಾರಿಗಳು ಪಾಲ್ಗೊಂಡಿದ್ದರು ‌