ಕಸಾಯಿಖಾನೆಗೆ ಹಸು ಮಾರಾಟ ಜಾಲದ ಶಂಕೆ: ಸೂಕ್ತ ಕ್ರಮಕ್ಕೆ ಒತ್ತಾಯ
ಬಂಟ್ವಾಳ : ಪೊಲೀಸ್ ಠಾಣೆಯಲ್ಲಿ ಹೀಗೊಂದು ದೂರು ದಾಖಲಾಗಿದೆ. ಪ್ರಸ್ತುತ ಮಹತೋಭಾರ ಶ್ರೀ ಕಾರಿಂಜೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿಯ ಸದಸ್ಯರಾಗಿರುವ ಪ್ರಶಾಂತ್ ನಾಯ್ಕ್ ಅನ್ನುವ ವ್ಯಕ್ತಿ ತಮ್ಮ ಪರಿಚಯದವರಾದ ಶೇರ್ ಬೆಟ್ಟು ರವಿ ಆಚಾರ್ಯ ಅನ್ನುವವರ ವಿಶ್ವಾಸ ಗಳಿಸಿಕೊಂಡು, ಅವರು ಮನೆಯಲ್ಲಿ ಪ್ರೀತಿಯಿಂದ ಸಾಕಿರುವ ಮೂರು ವರ್ಷ ಪ್ರಾಯದ ಎತ್ತನ್ನು ತನ್ನ ಮನೆಯಲ್ಲಿ ಹಸು ಬಿದೆಗೆ ಬಂದಿದೆ ಒಂದು ಸಲ ನಿಮ್ಮ ಎತ್ತನ್ನು ಕೋಡಿ ಎಂದು ನಂಬಿಸಿ ಗೋ ಕಳ್ಳರಿಗೆ ಅನಾಧಿಕೃತವಾಗಿ ಮಾರಾಟ ಮಾಡಿರುವ ಬಗ್ಗೆ ಶ್ರೀಯುತ ರವಿ ಆಚಾರ್ಯ ಇವರು ಸಾಮಾಜಿಕ ಹೋರಾಟ ಸಂಘಟನೆಯಾದ ಹಿಂದೂ ಜಾಗರಣ ವೇದಿಕೆಯ ಗಮನಕ್ಕೆ ತಂದು ಬಂಟ್ವಾಳ ಪೊಲೀಸ್ ಠಾಣೆಗೆ ತನಗೆ ಆದ ಅನ್ಯಾಯ ಬಗ್ಗೆ ತಾ.26-05-26 ರಂದು ದೂರು ನೀಡಿರುತ್ತಾರೆ.
ಈಗ ಮತ್ತೊಬ್ಬರು ಮಹಿಳೆ ತನ್ನ 3 ಹಸುಗಳನ್ನು ಚಿಕಿತ್ಸೆ ಗೆಂದು ಕೊಂಡು ಹೋಗಿ 6 ತಿಂಗಳಾದರೂ ಮರಳಿ ಕೊಡದ ಬಗ್ಗೆ ದೂರು ನೀಡಿದ್ದಾರೆ, ಪ್ರಶಾಂತ್ ನಾಯ್ಕ್ ಇವರು ಅನೇಕ ಕಡೆ ಇಂತಹ ಮೋಸ ಮಾಡಿರುವ ಆರೋಪ ಇರುವ ಕಾರಣ ತಕ್ಷಣ ಸೂಕ್ತ ತನಿಖೆ ನಡೆಸಿ, ಮೀನ ಮೇಷ ಮಾಡದೆ ಅವನ ಮೇಲೆ ಪ್ರಕರಣ ದಾಖಲು ಮಾಡಬೇಕು ಮತ್ತು ಗೋ ಕಳ್ಳತನದ ಜಾಲವನ್ನು ಪತ್ತೆ ಮಾಡದೇ ಹೋದಲ್ಲಿ ಉಗ್ರ ಹೋರಾಟ ನಡೆಸುವ ಬಗ್ಗೆ ಹಿಂದೂ ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಪ್ರಮುಖರು ಎಚ್ಚರಿಕೆ ನೀಡಿರುತ್ತಾರೆ.

