ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್ ಕುತ್ಯಾರು ಮತ್ತು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಜಂಟಿ ಆಶ್ರಯದಲ್ಲಿ 18 ನೇ ವರ್ಷದ ಜಿಲ್ಲಾ ಶೈಕ್ಷಣಿಕ ಸಹಮಿಲನ – 2025 ಸಮಾರಂಭ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಆನೆಗುಂದಿ ಸರಸ್ವತಿ ಪೀಠದ
ಪರಮಪೂಜ್ಯ ಜಗದ್ಗುರುಗಳಾಗಿರುವ ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿಯವರು ಮಹೇಶ ಹೈಕಾಡಿ,ಚಾರ ಅವರು ರಚಿಸಿದ ‘ ವಿಭಾಕ ‘ – ಒಂದು ಪರಿಚಯಾತ್ಮಕ ಕವನ ಹೊತ್ತಗೆಯ ಅನಾವರಣವನ್ನು ಮಾಡಿದರು.
ವಿದ್ಯಾಭಾರತಿ ಕರ್ನಾಟಕದ ಸಮಗ್ರ ಮಾಹಿತಿಯನ್ನು ಆಧರಿಸಿ ರಚಿತವಾದ ಕವನವಾಗಿದೆ.ನಿರಂತರವಾಗಿ ಹಲವಾರು ಸಾಹಿತ್ಯಿಕ ಚಟುವಟಿಕೆಗಳಲ್ಲಿ ,ವಿದ್ಯಾಭಾರತಿ ಕರ್ನಾಟಕದ ಶೈಕ್ಷಣಿಕ ಚಟುವಟಿಕೆಗಳನ್ನು ಹಲವಾರು ಸಂಸ್ಥೆಗಳಲ್ಲಿ ಕೈಗೊಂಡು ಅದರಿಂದ ಗಳಿಸಿದ ಅನುಭವ ಇದೀಗ ವಿಭಾಕವಾಗಿ ಅಕ್ಷರರೂಪದಲ್ಲಿ ಮೂಡಿಬಂದಿದೆ ಎಂದು ಪಾಂಡುರಂಗ ಪೈ ಸಿದ್ದಾಪುರ ನುಡಿದರು.
ಅಧ್ಯಕ್ಷರು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಪಾಂಡುರಂಗ ಪೈ ಸಿದ್ದಾಪುರ
ಇವರು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದರು.ಅತಿಥಿಗಳಾಗಿ ಕಾರ್ಯದರ್ಶಿ ವಿದ್ಯಾಭಾರತಿ ಕರ್ನಾಟಕ ಪ್ರಾಂತ ಬೆಂಗಳೂರು
ಶ್ರೀ ಶ್ರೀಪತಿ ಮೈಸೂರು, ಹಳೆಯಂಗಡಿ ಅಧ್ಯಕ್ಷರು ಆನೆಗುಂದಿ ಸರಸ್ವತಿ ಎಜುಕೇಶನ್ ಟ್ರಸ್ಟ್
ಶ್ರೀ ಬಿ. ಸೂರ್ಯಕುಮಾರ್ , ಪ್ರಧಾನ ಕಾರ್ಯದರ್ಶಿ ಆನೆಗುಂದಿ ಸಂಸ್ಥಾನ್ ಸರಸ್ವತಿ ಪೀಠ ಕುತ್ಯಾರು,
ಎಂ. ಬಿ. ಲೋಕೇಶ್ ಆಚಾರ್ಯ ,
ಮುಖ್ಯೋಪಾಧ್ಯಾಯಿನಿ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್ ಕುತ್ಯಾರು ಶ್ರೀಮತಿ ಅನಿತಾ ಉಪಸ್ಥಿತರಿದ್ದರು .
ಶ್ರೀ ಮಹೇಶ್ ಹೈಕಾಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು . ಸಂಸ್ಥೆಯ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಅನಿತಾ ಸ್ವಾಗತಿಸಿ ಸಹಶಿಕ್ಷಕಿಯಾದ ಶ್ರೀಮತಿ ಅಮಿತಾ ವಂದಿಸಿದರು. ಶ್ರೀಮತಿ ಸುಮಂಗಳಾ ಕಾರ್ಯಕ್ರಮವನ್ನು ನಿರೂಪಿಸಿದರು.

