ವಿಶ್ವ ತುಳುವೆರ್ ‘ಲಿಪಿ’ ದಿನದ ಪ್ರಯುಕ್ತ ಜನಪರ ಸೇವಾ ಅಭಿಯಾನ

0
4

ಮಂಗಳೂರು : ವಿಶ್ವ ತುಳುವೆರ್ (ರಿ.) ಮಂಗಳೂರು ವತಿಯಿಂದ ಆಯೋಜಿಸಲಾಗುತ್ತಿರುವ ವಿಶ್ವ ತುಳುವೆರ್ ದಿನ ಹಾಗೂ ವಿಶ್ವ ತುಳುವೆರೆ ‘ಲಿಪಿ’ ದಿನದ ಪ್ರಯುಕ್ತ, ಡಾ. ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ ಅವರ ಜನ್ಮದಿನದ ಸ್ಮರಣಾರ್ಥ ಹಿರಿಯ ನಾಗರಿಕರಿಗೆ ಅನುಕೂಲವಾಗುವ ವಿಶೇಷ ಸೇವಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಛಾಯಾ ಗ್ರಾಮ ಒನ್ ಸೇವಾ ಕೇಂದ್ರ, ಮೂಡುಬಿದಿರೆ ಇವರ ಸಹಕಾರದಲ್ಲಿ ಸೀನಿಯರ್ ಸಿಟಿಜನ್ ಕಾರ್ಡ್ ಮತ್ತು ಹಿರಿಯ ನಾಗರಿಕರ ಎಬಿಎಚ್‌ಎ (ಆಯುಷ್ಮಾನ್) ಕಾರ್ಡ್ ಅಭಿಯಾನ ಕಾರ್ಯಕ್ರಮ ಅ.10ರಂದು ನಡೆಯಲಿದೆ. ಯಾವುದೇ ಶುಲ್ಕವಿಲ್ಲದೆ ಈ ಸೇವೆಯನ್ನು ಒದಗಿಸಲಾಗುತ್ತಿದೆ ಎಂದು ಸಂಘಟಕರು ತಿಳಿಸಿದ್ದಾರೆ.

60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಸೀನಿಯರ್ ಸಿಟಿಜನ್ ಕಾರ್ಡ್ ಪಡೆಯಬಹುದಾಗಿದೆ. ಹಿರಿಯ ನಾಗರಿಕರಿಗೆ ವಿವಿಧ ಬ್ಯಾಂಕ್ ಠೇವಣಿಗಳಲ್ಲಿ ಹೆಚ್ಚಿನ ಬಡ್ಡಿದರ, ಕೆಲವು ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ರಿಯಾಯಿತಿ ಸೇರಿದಂತೆ ವಿವಿಧ ಸೌಲಭ್ಯಗಳು ದೊರೆಯುವ ಸಾಧ್ಯತೆ ಇದೆ. ರೈಲ್ವೆ ಮತ್ತು ಸರಕಾರಿ ಬಸ್ ಪ್ರಯಾಣದ ರಿಯಾಯಿತಿಗಳು ಸಂಬಂಧಪಟ್ಟ ಇಲಾಖೆ ಹಾಗೂ ಪ್ರಸ್ತುತ ನಿಯಮಾವಳಿಗಳಿಗೆ ಒಳಪಟ್ಟಿರುತ್ತವೆ.

ತರಬೇಕಾದ ದಾಖಲೆಗಳು
ಆಧಾರ್ ಕಾರ್ಡ್
ರಕ್ತ ಪರೀಕ್ಷಾ ವರದಿ
ಒಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
ಮೊಬೈಲ್ ಫೋನ್
ಎಬಿಎಚ್‌ಎ/ಆಯುಷ್ಮಾನ್ ಕಾರ್ಡ್‌ಗಾಗಿ ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಕಡ್ಡಾಯ

ಹಿರಿಯ ನಾಗರಿಕರು ಈ ಉಚಿತ ಸೇವಾ ಅಭಿಯಾನದ ಪ್ರಯೋಜನ ಪಡೆದುಕೊಳ್ಳುವಂತೆ ವಿಶ್ವ ತುಳುವೆರ್ ಸಂಘಟನೆಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಮನವಿ ಮಾಡಿದ್ದಾರೆ.

“ತುಳುಭಾಷೆನ್ ಒರಿಪಾಗ, ತುಳುನಾಡ್‌ನ ಒರಿಪಾಗ” ಎಂಬ ಆಶಯದೊಂದಿಗೆ ನಡೆಯುವ ಈ ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸ್ವಾಗತ ಕೋರಲಾಗಿದೆ.