ಮಂಗಳೂರು : ವೈದ್ಯರಿಂದ ದೇಶದ ನಂ.1 ಶಿಫಾರಸು ಪಡೆದ ಬ್ರ್ಯಾಂಡ್ ಆಗಿರುವ ಹಿಮಾಲಯ ಬೇಬಿಕೇರ್ ತನ್ನ ಜನಪ್ರಿಯ ಗೋಲ್ಡನ್ ಗಿಫ್ಟ್ ಪ್ಯಾಕ್ ಸ್ಪರ್ಧೆಯ ವಿಜೇತರನ್ನು ಅಧಿಕೃತವಾಗಿ ಪ್ರಕಟಿಸಿದೆ. ಪೋಷಕರು ತಮ್ಮ ಮುದ್ದು ಕಂದಮ್ಮಗಳೊಂದಿಗಿನ ಅವಿಸ್ಮರಣೀಯ ಕ್ಷಣಗಳನ್ನು ಸಂಭ್ರಮಿಸಿ ಹಂಚಿಕೊಳ್ಳಲು ರೂಪಿಸಲಾಗಿದ್ದ ಈ ಅಭಿಯಾನದಲ್ಲಿ ದೇಶಾದ್ಯಂತ ಒಟ್ಟು 12 ಮಂದಿ ವಿಜೇತರನ್ನು ಆಯ್ಕೆ ಮಾಡಲಾಗಿದೆ.
ಉತ್ತರ, ದಕ್ಷಿಣ, ಪೂರ್ವ ಹಾಗೂ ಪಶ್ಚಿಮ ಭಾರತವನ್ನು ಪ್ರತಿನಿಧಿಸುವಂತೆ ನಾಲ್ವರು ವಿಜೇತರಿಗೆ ತಲಾ ₹1 ಲಕ್ಷ ಮೌಲ್ಯದ ಚಿನ್ನದ ಬಹುಮಾನ ಹಾಗೂ ಎಂಟು ವಿಜೇತರಿಗೆ ತನಿಷ್ಕ್ ಅಥವಾ ಕಲ್ಯಾಣ್ ಕಾಯಿನ್‌ಗಳ ರೂಪದಲ್ಲಿ ನಗದೀಕರಿಸಬಹುದಾದ ತಲಾ ₹10,000 ಮೌಲ್ಯದ ಬೆಳ್ಳಿ ವೋಚರ್‌ಗಳನ್ನು ಘೋಷಿಸಲಾಗಿದೆ. ವಿಜೇತರ ಪೈಕಿ ವಿನೋದಿನಿ ಲಿಯೋ, ಸುಶ್ರೀ ಸಂಗೀತಾ ಬೆವುರಾ, ಜಯಂತಿ ದೇವಿ, ಡೇವಿಡ್ ರಾಜ್ ದೇವರಕೊಂಡ ಮತ್ತು ಸರ್ಫರಾಜ್ ಅಹ್ಮದ್ ಪ್ರಮುಖರಾಗಿದ್ದಾರೆ.
ಶುಭಾರಂಭದ ಸಂಕೇತವಾಗಿ ಮಾರುಕಟ್ಟೆಗೆ ಪರಿಚಯಿಸಲಾಗಿದ್ದ ‘ಹಿಮಾಲಯ ಬೇಬಿ ಗೋಲ್ಡನ್ ಗಿಫ್ಟ್ ಪ್ಯಾಕ್’ ಖರೀದಿಸಿದ ಗ್ರಾಹಕರಿಗೆ ‘ಹಿಮಾಲಯ ಗೋಲ್ಡನ್ ಮೊಮೆಂಟ್ಸ್ ಪ್ರೋಗ್ರಾಂ’ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಪ್ಯಾಕ್‌ನ ಒಳಗಿದ್ದ ಕರಪತ್ರವನ್ನು ಸ್ಕ್ರ್ಯಾಚ್ ಮಾಡಿ ವಿಶಿಷ್ಟ ಕೋಡ್ ಪಡೆದು, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಪೋಷಕರು ತಮ್ಮ ಮಕ್ಕಳೊಂದಿಗಿನ ಮಧುರ ನೆನಪಿನ ಫೋಟೋ/ಕ್ಷಣಗಳನ್ನು ಅಪ್‌ಲೋಡ್ ಮಾಡಬೇಕಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಖಚಿತ ಬಹುಮಾನವಾಗಿ ₹500 ಮೌಲ್ಯದ ‘ಮೈ ಬೇಬಿ & ಮಿ’ ಇ-ಪುಸ್ತಕವನ್ನು ಉಚಿತವಾಗಿ ನೀಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಹಿಮಾಲಯ ವೆಲ್‌ನೆಸ್‌ನ ಬೇಬಿಕೇರ್ ವಿಭಾಗದ ನಿರ್ದೇಶಕ ಚಕ್ರವರ್ತಿ ಎನ್.ವಿ. ಅವರು, “ಪೋಷಕತ್ವವನ್ನು ವಿಶೇಷವಾಗಿಸುವ ದೈನಂದಿನ ಅಪೂರ್ವ ಕ್ಷಣಗಳನ್ನು ಆಚರಿಸಲು ಈ ಸ್ಪರ್ಧೆಯು ನಮಗೊಂದು ಉತ್ತಮ ವೇದಿಕೆಯಾಗಿದೆ. ಕುಟುಂಬಗಳೊಂದಿಗೆ ಇಂತಹ ಅರ್ಥಪೂರ್ಣ ಒಡನಾಟ ಬೆಳೆಸಿಕೊಳ್ಳಲು ನಾವು ಸದಾ ಬದ್ಧರಾಗಿದ್ದು, ಮುಂದೆಯೂ ಇಂತಹ ವಿಶೇಷ ಅನುಭವಗಳನ್ನು ಗ್ರಾಹಕರಿಗೆ ನೀಡಲಿದ್ದೇವೆ,” ಎಂದರು.
ಸ್ಪರ್ಧೆಯ ವಿಜೇತರಲ್ಲಿ ಒಬ್ಬರಾದ ಸುಶ್ರೀ ಸಂಗೀತಾ ಬೆವುರಾ ಮಾತನಾಡಿ, “ಗೋಲ್ಡನ್ ಗಿಫ್ಟ್ ಪ್ಯಾಕ್ ಸ್ಪರ್ಧೆಯು ನಮಗೆ ಅತ್ಯಂತ ಸಂತಸದ ಅನುಭವ ನೀಡಿದೆ. ಮಕ್ಕಳೊಂದಿಗಿನ ದೈನಂದಿನ ಸುಂದರ ಕ್ಷಣಗಳನ್ನು ಸಂಭ್ರಮಿಸಲು ಇಂತಹ ಸುವರ್ಣಾವಕಾಶ ಕಲ್ಪಿಸಿದ ಹಿಮಾಲಯ ಬೇಬಿಕೇರ್‌ಗೆ ಧನ್ಯವಾದಗಳು” ಎಂದು ಸಂತಸ ಹಂಚಿಕೊಂಡರು.

