ಎನರ್ಜಿ ಡ್ರಿಂಕ್ ವಿಭಾಗ ವೇಗವಾಗಿ ಬೆಳೆಯುತ್ತಿದೆ: ತರುಣ್ ಭಗತ್
ಹೊಸ ಅಡ್ರಿನಾಲಿನ್ ರಶ್ ಅಭಿಯಾನ ಅನಾವರಣ
ಮಂಗಳೂರು: ದೇಶದ ಪ್ರಮುಖ ಪಾನೀಯ ತಯಾರಿಕಾ ದೈತ್ಯ ಪೆಪ್ಸಿಕೋ ಇಂಡಿಯಾ ಇಂದಿನ ಯುವ ಪೀಳಿಗೆಯನ್ನು ಸೆಳೆಯಲು ಜಾಗತಿಕ ಮಟ್ಟದಲ್ಲಿ ಅತ್ಯಂತ ಜನಪ್ರಿಯವಾಗಿರುವ ತನ್ನ ಪ್ರೀಮಿಯಂ ಎನರ್ಜಿ ಡ್ರಿಂಕ್ ಬ್ರ್ಯಾಂಡ್ ಅಡ್ರಿನಾಲಿನ್ ರಶ್® ಅನ್ನು ಮಂಗಳೂರಿನಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ.
ವೇಗವಾಗಿ ಬೆಳೆಯುತ್ತಿರುವ ಮಾಸ್ ಪ್ರೀಮಿಯಂ ವಿಭಾಗದಲ್ಲಿ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಜಾಗತಿಕ ಗುಣಮಟ್ಟದ ಪಾನೀಯವನ್ನು ನೀಡಲು ಪೆಪ್ಸಿಕೋ ನಿರ್ಧರಿಸಿದ್ದು, ಅತ್ಯಾಕರ್ಷಕ ಪ್ರೀಮಿಯಂ ಕ್ಯಾನ್ ವಿನ್ಯಾಸದಲ್ಲಿ ಲಭ್ಯವಿರುವ ಈ ಎನರ್ಜಿ ಡ್ರಿಂಕ್ ಗೆ ಕೇವಲ ರೂ. 60 ನಿಗದಿಪಡಿಸಲಾಗಿದೆ.
ಗ್ರಾಹಕರ ವಿಭಿನ್ನ ಅಗತ್ಯಕ್ಕೆ ತಕ್ಕಂತೆ ಈ ಪಾನೀಯವನ್ನು ಪ್ಯಾಶನ್ ರಶ್ ಮತ್ತು ಕ್ಲಾಸಿಕ್ ರಶ್ ಎಂಬ ಎರಡು ವಿಶಿಷ್ಟ ಫ್ಲೇವರ್ ಗಳಲ್ಲಿ ಪರಿಚಯಿಸಲಾಗಿದೆ. ಪ್ಯಾಶನ್ ರಶ್ ಫ್ಲೇವರ್ ಕೆಫೀನ್, ಟೌರಿನ್ ಮತ್ತು ವಿಟಮಿನ್ ಗಳ ಅಂಶ ಹೊಂದಿದ್ದು, ಕೆಲಸದಲ್ಲಿ ಗರಿಷ್ಠ ಏಕಾಗ್ರತೆ ನೀಡಲು ಸಹಕಾರಿಯಾಗಿದೆ. ಕ್ಲಾಸಿಕ್ ರಶ್ ಅನ್ನು ದೈನಂದಿನ ಚಟುವಟಿಕೆಗಳಲ್ಲಿ ಸದಾ ಸಕ್ರಿಯರಾಗಿರಲು ಮತ್ತು ಅತ್ಯುತ್ತಮ ಪ್ರದರ್ಶನ ನೀಡಲು ರೂಪಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿರುವ ಪೆಪ್ಸಿಕೋ ಇಂಡಿಯಾದ ಎನರ್ಜಿ ಡ್ರಿಂಕ್ಸ್ ವಿಭಾಗದ ಮುಖ್ಯಸ್ಥರಾದ ದೀಕ್ಷಾ ಬಜಾಜ್ ಅವರು, “ತಮ್ಮ ಸಂಪೂರ್ಣ ಸಾಮರ್ಥ್ಯ ಬಳಸಿ ಕೆಲಸ ಮಾಡಲು ಹೊರಡುವ ಹೊಸ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಅಡ್ರಿನಾಲಿನ್ ರಶ್ ಬಿಡುಗಡೆ ಮಾಡಿದ್ದೇವೆ. ಯುವ ಗ್ರಾಹಕರು ತಮ್ಮ ಗುರಿಗಳನ್ನು ಬೆನ್ನಟ್ಟಲು ಪ್ರೇರೇಪಿಸುವ ಬ್ರ್ಯಾಂಡ್ ಅನ್ನು ಕಟ್ಟುವುದು ನಮ್ಮ ಉದ್ದೇಶವಾಗಿದೆ” ಎಂದರು.
ಪೆಪ್ಸಿಕೋ ಇಂಡಿಯಾದ ಇಂಡಿಯಾ ಬಿಸಿನೆಸ್ ಯೂನಿಟ್ ಬಿವರೇಜಸ್ ವಿಭಾಗದ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ತರುಣ್ ಭಗತ್ ಅವರು, “ಭಾರತದಲ್ಲಿ ಎನರ್ಜಿ ಡ್ರಿಂಕ್ಸ್ ವಿಭಾಗವು ಅತ್ಯಂತ ವೇಗದ ಬೆಳವಣಿಗೆಯನ್ನು ಕಾಣುತ್ತಿದೆ. ಗ್ರಾಹಕರು ತಮ್ಮ ಆಕಾಂಕ್ಷೆಗಳಿಗೆ ತಕ್ಕಂತೆ ಸರಿಹೊಂದುವ ಉತ್ಪನ್ನಗಳನ್ನು ಹೆಚ್ಚಾಗಿ ಬಯಸುತ್ತಿದ್ದಾರೆ” ಎಂದರು.
ಇದೇ ಸಂದರ್ಭದಲ್ಲಿ ಕಂಪನಿಯು “ಎ-ರಶ್, ಎ-ಗೇಮ್ ಆನ್” ಎಂಬ ಡಿಜಿಟಲ್ ಜಾಹೀರಾತು ಚಿತ್ರವನ್ನು ಅನಾವರಣಗೊಳಿಸಿದೆ. ಇಂದಿನ ಯುವಜನತೆಯ ನೆಚ್ಚಿನ ಹವ್ಯಾಸಗಳಾದ ಫೋಟೋಗ್ರಫಿ ಮತ್ತು ಪಾರ್ಕರ್ (ಸಾಹಸಮಯ ಜಿಗಿತ) ಮೂಲಕ ಸಿನಿಮಾ ಶೈಲಿಯ ಕಥಾಹಂದರವನ್ನು ಈ ಚಿತ್ರವು ಹೊಂದಿದೆ. ಯುವ ಗ್ರಾಹಕರು ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರವನ್ನು ವೀಕ್ಷಿಸಬಹುದು. ಇಂದಿನ ಯುವ ಸಂಸ್ಕೃತಿಗೆ ಪೂರಕವಾಗುವಂತೆ ರೂಪಿಸಲಾದ ಈ ಅಭಿಯಾನವು, ಕಂಟೆಂಟ್ ಕ್ರಿಯೇಟರ್ ಗಳ ಕಥೆಗಳು, ಇಂಟರ್ನೆಟ್ ಟ್ರೆಂಡ್ ಗಳು ಮತ್ತು ಸಾಮಾಜಿಕ ಜಾಲತಾಣಗಳ ಚರ್ಚೆಗಳ ಮೂಲಕ ಜೆನ್- ಜೀ ಪ್ರೇಕ್ಷಕರನ್ನು ನೇರವಾಗಿ ತಲುಪುವ ಗುರಿ ಹೊಂದಿದೆ.

