ಪೆರ್ಡೂರು ಕುಲಾಲ ಸಂಘ, ದಾನಿಗಳ ಹಾಗೂ ಶ್ರಮದಾನದಿಂದ ನಿರ್ಮಿಸಲಾದ ಮನೆ ಹಸ್ತಾಂತರ

0
39

ಪೆರ್ಡೂರು : ಪೆರ್ಡೂರು ಕುಲಾಲ ಸಂಘ, ದಾನಿಗಳ ನೆರವಿನಿಂದ ಹಾಗೂ ಶ್ರಮದಾನದಿಂದ ನಿರ್ಮಿಸಲಾದ ಮನೆ ಶಿವಲೀಲಾ ನಿಲಯ ಹಸ್ತಾಂತರ ಕಾರ್ಯಕ್ರಮ ಹಾಗೂ ಸೇವಾ ಯೋಜನೆಗೆ ಕೈ ಜೋಡಿಸಿದ ಗಣ್ಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸುವ ಕಾರ್ಯಕ್ರಮ ಪೆರ್ಡೂರು ಕುಕ್ಕೆಹಳ್ಳಿ ಬೊಂಟೆಕುಮೇರಿ ಯಲ್ಲಿ ನಡೆಯಿತು..


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೆರ್ಡೂರು ಕುಲಾಲ ಸಂಘದ ಅಧ್ಯಕ್ಷರಾದ ಕಾಳು ಕುಲಾಲ್ ವಹಿಸಿದ್ದರು. ಉದ್ಘಾಟಕರಾಗಿ ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ದ ಅಧ್ಯಕ್ಷರಾದ ಸಂತೋಷ್ ಕುಲಾಲ್ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಸುಧಾಕರ್ ಕುಲಾಲ್ ಕುಕ್ಕೆಹಳ್ಳಿ, ಸಂತೋಷ್ ಕುಲಾಲ್ ಕುಕ್ಕೆಹಳ್ಳಿ ಹಾಗೂ ರಾಮ ಕುಲಾಲ್ ಐತು ಕುಲಾಲ್ ಕೃಷ್ಣಪ್ಪ ಕುಲಾಲ್ ರತ್ನಾ ಮೇನಬೈಲು ಅವರು ಉಪಸ್ಥಿತರಿದ್ದರು.

ದಾನಿಗಳ ನಿರಂತರ ಬೆಂಬಲ ಹಾಗೂ ಸಂಘದ ಒಗ್ಗಟ್ಟಿನ ಶ್ರಮದಿಂದಾಗಿ ಇಂದು ಅರ್ಹ ಕುಟುಂಬವೊಂದಕ್ಕೆ ಸುಸಜ್ಜಿತವಾದ ಸೂರು ಒದಗಿಸಲು ಸಾಧ್ಯವಾಗಿದೆ. ಸಮಾಜದ ಏಳಿಗೆಗಾಗಿ ಕುಲಾಲ ಸಂಘವು ಇಂತಹ ಇನ್ನೂ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಬದ್ಧವಾಗಿದೆ..

ಕಾಳು ಕುಲಾಲ್ ಅಧ್ಯಕ್ಷರು
ಕುಲಾಲ ಸಂಘ (ರಿ ) ಪೆರ್ಡೂರು

LEAVE A REPLY

Please enter your comment!
Please enter your name here