ಕವಿ ಸು ಶಿ ಶಾಂತಕುಮಾರ್ ಹರವೆ “ಬರಹ ಮಾಣಿಕ್ಯ” ಪ್ರಶಸ್ತಿಗೆ ಆಯ್ಕೆ

0
10

ಚಾಮರಾಜನಗರ : ವಿಶ್ವ ಬಂಜಾರ ಕಲಾ ಸಾಹಿತ್ಯಕ ಸಂಘ (ರಿ ) ಅಮೀನಗಡ ರವರ ಬರಹವೇ ಶಕ್ತಿ ಎಂಬ ವೇದಿಕೆಯಿಂದ ಮೂರನೇ ಸಾಹಿತ್ಯೋತ್ಸವವನ್ನು ದಿನಾಂಕ 06-09 -26 ರಂದು ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಚಾಮರಾಜನಗರ ಜಿಲ್ಲೆ ಹಾಗೂ ತಾಲೂಕಿನ ಕವಿ ಹಾಗೂ ಬರಹಗಾರರಾದ ಸು ಶಿ ಶಾಂತಕುಮಾರ್ ಹರವೆ ರವರು ರಾಜ್ಯಮಟ್ಟದ “ಬರಹ ಮಾಣಿಕ್ಯ ” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಶ್ರೀಯುತರು ವಿಶ್ವ ಬಂಜಾರ ಕಲಾ ಸಾಹಿತ್ಯಕ ಸಂಘವು ಬರಹವೇ ಶಕ್ತಿ ಎಂಬ ವೇದಿಕೆಯ ಮೂಲಕ ಆನ್ಲೈನ್ ನಲ್ಲಿ ನಡೆಸುತ್ತಿರುವ ಹಲವಾರು ಕವಿಗೋಷ್ಠಿ, ಲೇಖನ, ರಸಪ್ರಶ್ನೆ ಮುಂತಾದ ಸಾಹಿತ್ಯ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಸೃಜನಶೀಲ ಬರಹಗಳಿಂದ ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷ ಇವರಿಗೆ ವೇದಿಕೆಯು ಆನ್ಲೈನ್ ಮೂಲಕ “ಹೆಮ್ಮೆಯ ಕನ್ನಡಿಗ “ಎಂಬ ಪ್ರಶಸ್ತಿಯನ್ನು ನೀಡಿ ಅಭಿನಂದಿಸಲಾಗಿತ್ತು.

ಈ ಬಾರಿ ವೇದಿಕೆಯು ಹಮ್ಮಿಕೊಂಡಿರುವ 3 ನೇ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ” ಬರಹ ಮಾಣಿಕ್ಯ ” ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ ಎಂದು ವಿಶ್ವ ಬಂಜಾರ ಕಲಾ ಸಾಹಿತ್ಯಕ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಚಂದ್ರಕಾಂತ ಜಿ ಚೌವ್ಹಾಣ ರವರು ತಿಳಿಸಿದ್ದಾರೆ.