ಮೂಡುಬಿದಿರೆ: ಮಾ. 31ರಂದು ಬೆಳುವಾಯಿ ಗ್ರಾಮದ ಗುಜ್ಜರ ಗುಂಡಿ ಎಂಬಲ್ಲಿ, 70ರ ಹರೆಯದ ವೃದ್ದೆ ಇಂದಿರಾ ಎಂಬದರ ಕುತ್ತಿಗೆಯಿಂದ ಚಿನ್ನದ ಕರಿಮಣಿ ಸರವನ್ನು ಎಳೆದೊಯ್ದು ಪರಾರಿಯಾಗಿದ್ದ ಆರೋಪಿ ಕಾಂತವಾರ ಸಮೀಪದ ಪ್ರಶಾಂತ್ ಸಾಲ್ಯಾನ್ ನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.
ಪ್ರಶಾಂತ್ ಸಾಲ್ಯಾನ್ 2-12-2024 ರಂದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಕಾಂತಾವರ ಅಂಬರೀಶ್ ಗುಹೆ ಬಳಿ ನಡೆದುಕೊಂಡು ಹೋಗುತ್ತಿದ್ದ ವೃದ್ಧ ಮಹಿಳೆಯ ಕುತ್ತಿಗೆಯಿಂದ ಸುಲಿಗೆ ನಡೆಸಿರುವುದಾಗಿಯೂ ಈ ಸಂದಭ೯ ಒಪ್ಪಿಕೊಂಡಿರುತ್ತಾನೆ.
ಈ ಬಗ್ಗೆ ಉಡುಪಿ ಜಿಲ್ಲೆಯ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ಪ್ರಕರಣದಲ್ಲಿ ದಸ್ತಗಿರಿ ಮಾಡಿದ ಆರೋಪಿಯಿಂದ ಮೇಲೆ ನಮೂದಿಸಿದ ಪ್ರಕರಣದಲ್ಲಿ ಸುಲಿಗೆ ಮಾಡಿದ ಚಿನ್ನದ ಮಾಂಗಲ್ಯ ಕರಿಮಣಿ ಸರ ಹಾಗೂ ಚಿನ್ನದ ಸರದ ಒಂದು ತುಂಡು ಸ್ವಾಧೀನಪಡಿಸಿಕೊಂಡಿದ್ದು ಹಾಗೂ ಆರೋಪಿಯು ಕೃತ್ಯಕ್ಕೆ ಬಳಸಿದ ಕೆಂಪು ಬಣ್ಣದ KA 20 X 3393 ನೇ TVS Apache ಮೊಟಾರು ಸೈಕಲ್ ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ವಾಧೀನ ಪಡಿಸಿಕೊಂಡಿರುವ ಸೊತ್ತುಗಳ ಅಂದಾಜು ಮೌಲ್ಯ ಸುಮಾರು 3,30,000/- ರೂ ಆಗಬಹುದು ಎಂದು ಅಂದಾಜಿಸಲಾಗಿದೆ.
ಈ ಪ್ರಕರಣದಲ್ಲಿ ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ಐಪಿಎಸ್ ಅವರ ಮಾರ್ಗದರ್ಶನದಂತೆ ಡಿಸಿಪಿಗಳಾದ ಸಿದ್ಧಾರ್ಥ ಗೊಯಲ್ ಐಪಿಎಸ್ (ಕಾ&ಸು), ರವಿಶಂಕರ್ (ಅ & ಸಂ) ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಶ್ರೀಕಾಂತ್. ಕೆ ರವರ ನಿರ್ದೇಶನದಂತೆ, ಈ ಕಾರ್ಯಚರಣೆಯಲ್ಲಿ ಮೂಡುಬಿದಿರೆ ಠಾಣಾ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ರವರ ನೇತೃತ್ವದ ತಂಡದ ಪಿ.ಎಸ್.ಐ ಗಳಾದ ಕೃಷ್ಣಪ್ಪ ಮತ್ತು ಪ್ರತಿಭಾ ಕೆ.ಸಿ ಹಾಗೂ ಎ.ಎಸ್.ಐ ರಾಜೇಶ್ ಮತ್ತು ಹೆಚ್.ಸಿ ಗಳಾದ ರಾಜೇಶ್, ಮೊಹಮ್ಮದ್ ಇಕ್ಬಾಲ್ , ಪ್ರದೀಪ್ ಕುಮಾರ್ ಬಣಗರ್, ಮೊಹಮ್ಮದ್ ಹುಸೇನ್, ಅಕೀಲ್ ಅಹಮ್ಮದ್, ನಾಗರಾಜ್ ಲಮಾಣಿ ಮತ್ತು ಪಿ.ಸಿ ವೆಂಕಟೇಶ್ ರವರುಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.