ಮೂಡುಬಿದಿರೆ: ವಿವಿಧ ಮೇಳಗಳಲ್ಲಿ ಯಕ್ಷಗಾನ ಕಲಾವಿದರಾಗಿ ಹಾಗೂ ವೃತ್ತಿಯಲ್ಲಿ ಚಿನ್ನಾಬೆಳ್ಳಿಯಾ ಕೆಲಸ ಮಾಡುತ್ತಿದ್ದು ಹಾಗು ಜ್ಯುವೆಲ್ ಅಪ್ರೈಸರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ತೋಡಾರು ಗ್ರಾಮದ ಪ್ರಸಾದ್ ಆಚಾರ್ಯ ಮತ್ತು ಶಮಿತಾ ದಂಪತಿಗಳು ತಾ. 05-04-2025ರಂದು ಬೆಳುವಾಯಿಯಲ್ಲಿ ನಡೆದ ವಾಹನ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದು. ವೈದ್ಯರು ಸುಮಾರು 20ಲಕ್ಷ ಚಿಕಿತ್ಸಾ ವೆಚ್ಚವನ್ನು ಅಂದಾಜಿಸಿರುತ್ತಾರೆ. ಇವರಿಗೆ 6 ವರ್ಷದ ಮಗನಿದ್ದು ಅದೃಷ್ಟವಶಾತ್ ಮಗ ಅಪಘಾತದಿಂದ ಪಾರಾಗಿದ್ದಾನೆ. ಇವರು ತುಂಬಾ ಪರಿಶ್ರಮ ಜೀವಿಯಾಗಿದ್ದು ಈಗಾಗಲೇ ಹೊಸ ಮನೆ ನಿರ್ಮಾಣ ಮಾಡಿರುವುದರಿಂದ ಆರ್ಥಿಕ ಸಂಕಷ್ಟದಲ್ಲಿದ್ದು ಚಿಕಿತ್ಸಾ ವೆಚ್ಚವನ್ನು ಭರಿಸಲು ಅಸಾಧ್ಯವಾಗಿರುತ್ತಾರೆ.
ದಾನಿಗಳ ಹಣದ ಸಹಾಯದ ನಿರೀಕ್ಷೆಯಲ್ಲಿ ಇದ್ದಾರೆ ಈ ಕುಟುಂಬಕ್ಕೆ ನಿಮ್ಮ ಸಹಾಯದ ತುರ್ತು ಅಗತ್ಯವಿದೆ. ಸಹೃದಯರು ಹಣದ ಸಹಾಯದ ಮೂಲಕ ಸಹಕರಿಸಬೇಕಾಗಿ ವಿನಂತಿ.
