ನಾಯಕ್ ಕುಲಪುರಷ ಕಮಿಟಿಯಿಂದ ಪ್ರತಿಭಾ ಪುರಸ್ಕಾರ

0
71

ಉಡುಪಿ : ಕೌಂಡಿಣ್ಯ ಗೋತ್ರ ನಾಯಕ್ ಕುಲಪುರಷ ಕಮಿಟಿ ( ರಿ )  ಶ್ರೀ  ರಾಮನಾಥ ದೇವಸ್ತಾನ ಗೋವಾ .ಇದರ ಉಡುಪಿ ಜಿಲ್ಲಾ  ಶಾಖೆ ವತಿಯಿಂದ   ಇತ್ತೀಚಿಗೆ  ಹರಿಖಂಡಿಗೆ ಶ್ರೀ ವೆಂಕಟರಮಣ ದೇವಸ್ಥಾನದ  ಶ್ರೀ ಸುಧೀಂದ್ರ ತೀರ್ಥ ಸಭಾಭವನ ದಲ್ಲಿ  ಜರಗಿತು.

ದಿವಂಗತ ಬಿ. ಜಯರಾಮ ನಾಯಕ್ ಅವರ ಸ್ಮರಣಾರ್ಥ  8 ನೇ ವರ್ಷದ ಪ್ರತಿಭಾ  ಪುರಸ್ಕಾರ ಸಮಾರಂಭ ದಲ್ಲಿ   ಈ ಬಾರಿಯಾ  ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ವಿಶೇಷ  ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ, ಗೌರವಿಸಿ ಹಾಗೂ ಪ್ರೋತ್ಸಾಹಿಸುವ ಉದ್ದೇಶದಿಂದ ಉಡುಪಿ ಜಿಲ್ಲೆಯ ವಿವಿಧ   ಪ್ರದೇಶಗಳಿಂದ ಆಗಮಿಸಿದ 23 ಮಂದಿ ವಿದ್ಯಾರ್ಥಿಗಳನ್ನು ಗೌರವಿಸಿ ಪ್ರತಿ ವಿದ್ಯಾರ್ಥಿಗೆ 5 ಸಾವಿರ ನಗದು , ಸ್ಮರಣಿಕೆ ಹಾಗೂ   ಪ್ರಶಂಸಾ ಪತ್ರಗಳ ಯೊಂದಿಗೆ  ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಸದಸ್ಯರಾದ  ಉಮೇಶ್ ನಾಯಕ್,  ಪ್ರೇಮಾನಂದ ನಾಯಕ್,  ಶ್ರೀಧರ ನಾಯಕ್,  ಕಮಲಾಕ್ಷ ನಾಯಕ್,  ರಾಜಾರಾಮ ನಾಯಕ್,  ಚಂದ್ರಕಾಂತ ನಾಯಕ್, ಡಾ. ಕೃಷ್ಣಾನಂದ ನಾಯಕ್,  ರಾಧಾಕೃಷ್ಣ ನಾಯಕ್,  ಶ್ರೀಪತಿ ನಾಯಕ್, ಶಾಂತಾ ನಾಯಕ್ ಹಾಗೂ  ಅಶೋಕ್ ಪ್ರಭಾಕರ ನಾಯಕ್ ,ದೇವಳದ ಆಡಳಿತ ಮಂಡಳಿಯ ಸದಸ್ಯರು ಮತ್ತು  ನೂರಾರು ಸಮಾಜ ಭಾಂದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here