ಮೂಡುಬಿದಿರೆ : ತುಳುನಾಡಿನ ಸಾಧನಾ ಶ್ರೇಷ್ಠ , ನಿಟ್ಟೆ ವಿನಯ ಹೆಗ್ಡೆಯವರು ಶಿಕ್ಷಣ ತಜ್ಞರಾಗಿಯೂ, ದೇಶಾಭಿಮಾನಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಗಣ್ಯ ವ್ಯಕ್ತಿಯಾಗಿದ್ದರು. ಶ್ರೀ ಮಠದ ನಿಷ್ಠಾವಂತ ಭಕ್ತರಾಗಿದ್ದ ಅವರು ಸಮಾಜ ಸೇವೆಯಲ್ಲಿಯೂ ಅಪಾರ ಆಸಕ್ತಿಯನ್ನು ಹೊಂದಿದ್ದರು. ಅವರ ಅಗಲುವಿಕೆಯಿಂದ ಉಂಟಾದ ದುಃಖವನ್ನು ಸಹಿಸುವ ಶಕ್ತಿಯನ್ನು ಕುಟುಂಬಸ್ಥರಿಗೆ ಭಗವಂತ ನೀಡಲಿ ಹಾಗೂ ಅವರ ಅಗಲಿದ ಆತ್ಮಕ್ಕೆ ಉತ್ತಮ ಸದ್ಗತಿ ಲಭಿಸಲಿ ಎಂದು ಶ್ರೀ ಜಿನೇಂದ್ರ ಭಗವಂತರಲ್ಲಿ , ಜಿನ ಶಾಸನ ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಅವರು ತಿಳಿಸಿದ್ದಾರೆ.
ಈ ಪ್ರಾರ್ಥನೆಯನ್ನು ಶ್ರೀ ದಿಗಂಬರ ಜೈನ ಮಠ, ಮೂಡುಬಿದಿರೆ, ದಕ್ಷಿಣ ಕನ್ನಡ (574227) ವತಿಯಿಂದ ಸಲ್ಲಿಸಲಾಗಿದೆ.

