ಈದು ಪಡ್ಯಾರಮನೆಯ ಅಶೋಕ್ ಕುಮಾರ್ ಜೈನ್‌ಗೆ ಪ್ರತಿಷ್ಠಿತ ಕಂಬಳ ಅಕಾಡೆಮಿ ಗೌರವ

0
10

ಕಾರ್ಕಳ : ಕಂಬಳ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಗಮನಾರ್ಹ ಸಾಧನೆ ಮಾಡಿರುವ ಈದು ಪಡ್ಯಾರಮನೆಯ ಹಿರಿಯ ಕಂಬಳ ಓಟಗಾರ ಅಶೋಕ್ ಕುಮಾರ್ ಜೈನ್ ಅವರಿಗೆ 2026ನೇ ಸಾಲಿನ ‘ಕಂಬಳ ಅಕಾಡೆಮಿ ಪ್ರಶಸ್ತಿ’ ಲಭಿಸಿದೆ.‌

ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡ ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ ವತಿಯಿಂದ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.

ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಅಕ್ಟೋಬರ್ 8ರಂದು ಗುರುವಾರ ಬೆಳಿಗ್ಗೆ 11.30ಕ್ಕೆ ಒಂಟಿಕಟ್ಟೆಯ ಕೋಟಿ ಚೆನ್ನಯ ಕಂಬಳ ಕ್ರೀಡಾಂಗಣದಲ್ಲಿ ನಡೆಯಲಿದೆ.

ಕಂಬಳ ಕ್ರೀಡಾ ಕ್ಷೇತ್ರಕ್ಕೆ ಅಶೋಕ್ ಕುಮಾರ್ ಜೈನ್ ಅವರು ನೀಡಿರುವ ಅಪಾರ ಕೊಡುಗೆ, ಹಲವು ವರ್ಷಗಳ ಅನುಭವ ಹಾಗೂ ಸಾಧನೆಯನ್ನು ಪರಿಗಣಿಸಿ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ.

ಕಂಬಳ ಕ್ರೀಡೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅಶೋಕ್ ಕುಮಾರ್ ಜೈನ್ ಅವರಿಗೆ ಕಂಬಳ ಅಕಾಡೆಮಿ ಪ್ರಶಸ್ತಿ ದೊರೆತಿರುವುದು ಕಂಬಳಾಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.