
ಮನಾಮ : ಆರ್‌ಜಿಎಸ್ ಗ್ರೂಪ್ ಅರ್ಪಿಸಿದ ಕರಾವಳಿ ಮಿಲನ ಕಪ್ ವಾಲಿಬಾಲ್ ಪಂದ್ಯಾಟವು ಬಹರೈನ್‌ನ ಮನಾಮದಲ್ಲಿರುವ ಅಲಿ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಯಶಸ್ವಿಯಾಗಿ ಸಮಾಪನಗೊಂಡಿತು.
ಕರಾವಳಿಯ ಕ್ರೀಡಾಪಟುಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಪಂದ್ಯಾಟದಲ್ಲಿ ಬಹರೈನ್‌ನ ವಿವಿಧ ತಂಡಗಳು ಉತ್ಸಾಹದಿಂದ ಭಾಗವಹಿಸಿ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿದವು.

ಪಂದ್ಯಾಟದಲ್ಲಿ ಜಿ.ಎಸ್.ಎಸ್. ಬಹರೈನ್ ಬಿಲ್ಲವಾಸ್, ಉಡುಪಿ ಫ್ರೆಂಡ್ಸ್, ನಿಡಾ ಫ್ರೆಂಡ್ಸ್ ಹಾಗೂ ಜಿಂಜ್ ಫ್ರೆಂಡ್ಸ್ ಬಹರೈನ್ ತಂಡಗಳು ಸೇರಿದಂತೆ ಹಲವು ತಂಡಗಳು ಪಾಲ್ಗೊಂಡಿದ್ದವು. ಅಂತಿಮ ಪಂದ್ಯದಲ್ಲಿ ಫಿಲ್-ಆಮ್ ತಂಡ ವಿಜೇತವಾಗಿ ಹೊರಹೊಮ್ಮಿದರೆ, ವಾಲಿ ಫ್ರೆಂಡ್ಸ್ ತಂಡ ರನ್ನರ್‌ಅಪ್ ಸ್ಥಾನ ಪಡೆದುಕೊಂಡಿತು.
ವೈಯಕ್ತಿಕ ಪ್ರಶಸ್ತಿ ವಿಜೇತರು
* ಬೆಸ್ಟ್ ಅಟ್ಯಾಕರ್ :ಸಾಲ್ಬಿನ್ (ಜಿಎಸ್ಎಸ್ ಬೆಹರೈನ್ ಬಿಲ್ಲವಾಸ್.
* ಬೆಸ್ಟ್ ಸೆಟ್ಟರ್ :ನಿತಿನ್ (ಜಿಎಸ್ಎಸ್ ಬೆಹರೈನ್ ಬಿಲ್ಲವಾಸ್.
* ಬೆಸ್ಟ್ ಬ್ಲಾಕರ್ : ಸ್ವಸ್ತಿಕ್ (ಜಿಎಸ್ಎಸ್ ಬೆಹರೈನ್ ಬಿಲ್ಲವಾಸ್.
* ಬೆಸ್ಟ್ ಲಿಬೆರೋ : ಇಮ್ರಾನ್ (ಉಡುಪಿ ಫ್ರೆಂಡ್ಸ್ )
* ಬೆಸ್ಟ್ ಸರ್ವರ್ : ದಿನೇಶ್ (ಜಿನ್ಜ್ ಫ್ರೆಂಡ್ಸ್.
* ಬೆಸ್ಟ್ ಅಲ್ ರೌಂಡರ್ : ಹಪಿಲ್ (ಉಡುಪಿ ಫ್ರೆಂಡ್ಸ್ )
ಪಂದ್ಯಾಟದ ಯಶಸ್ಸಿಗೆ ಸಹಕರಿಸಿದ ಸಂಘಟಕರು, ಪ್ರಾಯೋಜಕರು, ತಂಡಗಳ ಆಟಗಾರರು ಹಾಗೂ ಕ್ರೀಡಾಭಿಮಾನಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಕರಾವಳಿಯ ವಿವಿಧ ಭಾಗಗಳ ಕ್ರೀಡಾಪಟುಗಳನ್ನು ಒಂದೆಡೆ ಸೇರಿಸಿದ ಕರಾವಳಿ ಮಿಲನ ಕಪ್ ಕ್ರೀಡಾ ಸೌಹಾರ್ದತೆ ಹಾಗೂ ಸ್ನೇಹಭಾವವನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ಯಶಸ್ವಿಯಾಯಿತು.

ಈ ಸಂದರ್ಭದಲ್ಲಿ ಮೊಹಮ್ಮದ್ ಅರ್ಷದ್ ಹಾಗೂ ಪ್ರಿಯಾಂಕಾ ಅಲ್ಮೇಡಾ ಸೇರಿದಂತೆ ಪಂದ್ಯಾಟದ ಆಯೋಜಕರು ಮತ್ತು ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಲಾಯಿತು.
ಕಾರ್ಯಕ್ರಮದ ನಿರೂಪಣೆ ಗಣೇಶ್ ಮಾಣಿಲ ನಿರ್ವಹಿಸಿದರು.
