ಸ್ವಾತಂತ್ರ್ಯ ದಿನಾಚರಣೆಗೆ ಸೀಮಿತವಾಗದೇ ಭಾರತದ ಅಭಿಮಾನ ಹೃದಯದ ಆಳದಲ್ಲಿ ಇರಬೇಕು – ವಾಸುದೇವ ಎಲ್.ರಾಯ್ಕರ್

0
8

ದಾವಣಗೆರೆ : ನಮ್ಮ ದಏಶದ ಸ್ವಾತಂತ್ರ್ಯ ಕೊಟ್ಟಿದ್ದು ಮಹಾತ್ಮಗಾಂಧಿ, ಅಂಬೇಡ್ಕರ್, ಸುಭಾಷ್‌ಚಂದ್ರಬೋಸ್ ಮುಂತಾದ ಹಿರಿಯರು ಕಠಿಣ ಪರಿಶ್ರಮದಿಂದ ಕಷ್ಟಪಟ್ಟಿದ್ದು ಶ್ಲಾಘನೀಯ. ಸ್ವಾತಂತ್ರ್ಯ ದಿನಾಚರಣೆಗೆ ಸೀಮಿತವಾಗದೇ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಕೊಟ್ಟವರ ಹಿರಿಯರಿಗೆ ಸ್ಮರಣಿಸಬೇಕು.

ಭಾರತದ ಅಭಿಮಾನ ನಮ್ಮ ನಿಮ್ಮೆಲ್ಲರ ಹೃಯದ ಆಳದಲ್ಲಿ ಇರಬೇಕು ಎಂದು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷರಾದ ವಾಸುದೇವ ಎಲ್.ರಾಯ್ಕರ್‌ರವರು ದಾವಣಗೆರೆಯ ಕಲಾಕುಂಚ ಕಛೇರಿಯ ಹೊರಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಭಾರತದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್‌ಶೆಣೈ ಮಾತನಾಡಿ, ನಮ್ಮ ದೇಶದಲ್ಲಿ ಯಾವುದೇ ಜಾತಿ, ಮತ, ಬೇಧವಿಲ್ಲದೇ ಇಡೀ ಪ್ರಪಂಚಕ್ಕೆ ನಮ್ಮ ದೇಶ ಖ್ಯಾತವಾಗಿದೆ ಎಂದರು. ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್ ಶೆಣೈ, ಕಲಾಕುಂಚ ಗೌರವ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ, ಎಂ.ಸಿ.ಸಿ.ಶಾಖೆಯ ಅಧ್ಯಕ್ಷರಾದ ಪ್ರಭಾ ರವೀಂದ್ರ ಪ್ರೇಮಾ ಮಹೇಶ್ವರಯ್ಯ, ಮುಕ್ತಾ ಶ್ರೀನಿವಾಸ ಪ್ರಭು, ಚನ್ನಬಸವ ಶೀಲವಂತ, ಎಂ.ಎಸ್.ಪ್ರಸಾದ್, ವಿಜಯಕುಮಾರ್ ಶೆಟ್ಟಿ, ಅಬ್ದುಲ್ ಸತ್ತಾರ್‌ಸಾಬ್, ಸವಿತಾ ವಿಜಯ ಕೂಲಂಬಿ, ಲೀಲಾ ಸುಭಾಷ್, ಸುಮಾ ಏಕಾಂತಪ್ಪ, ಶಿಲ್ಪಾ ಉಮೇಶ್ ಮುಂತಾದವರು ಉಪಸ್ಥಿತರಿದ್ದರು.

ಕಲಾಕುಂಚದ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ಪ್ರಾರಂಭದಲ್ಲಿ ಸ್ವಾಗತ ಮಾಡಿ, ನಿರೂಪಣೆ ಮಾಡಿ ಕೊನೆಯಲ್ಲಿ ವಂದಿಸಿದರು. ಕಲಾಕುಂಚದ ಮಹಿಳೆಯರು ಸಾಮೂಹಿಕವಾಗಿ ದೇಶ ಭಕ್ತಿ ಗೀತೆಗಳನ್ನು ಹಾಡಿದರು.