ಸಂಕಷ್ಟ ಹರ ಪ್ರಿಯದರ್ಶಿನಿ- ಯು ಟಿ ಖಾದರ್

0
5

ಐದನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಹಳೆಯಂಗಡಿ ಪ್ರಿಯದರ್ಶಿನಿ ಸಹಕಾರಿ ಸಂಘವು ಸಂಕಷ್ಟದಲ್ಲಿರುವವರಿಗೆ ಸಹಕರಿಸಿ ಅವರ ಬಾಳಲ್ಲಿ ನಗುವನ್ನು ನೀಡುತ್ತಿದೆ. ಗ್ರಾಮೀಣ ಪರಿಸರದಲ್ಲಿ ವಿವಿಧ ಚಟುವಟಿಕೆ ಹಾಗೂ ಸ್ವಉದ್ಯೋಗಿಗಳಿಗೆ ನೆರವನ್ನು ಒದಗಿಸುತ್ತಿರುವ ಸಂಘಕ್ಕೆ ಶುಭ ಹಾರೈಸಿ ಕರ್ನಾಟಕ ವಿಧಾನಸಭಾ ಸಭಾಧ್ಯಕ್ಷ ಯು ಟಿ ಖಾದರ್ ನುಡಿದರು.

ಗ್ರಾಹಕರೊಂದಿಗೆ ನೌಕರರ ಸ್ಪಂದನೆ, ಅಧ್ಯಕ್ಷರು ಹಾಗೂ ನಿರ್ದೇಶಕರುಗಳ ಉತ್ತೇಜನದಿಂದ ಸಂಸ್ಥೆ ಉತ್ತಮವಾಗಿ ಮುಂದುವರಿಯುತ್ತಿದೆ ಎಂದು ಮಾಜಿ ಸಚಿವ ಕೆ ಅಭಯ ಚಂದ್ರ ಜೈನ್ ಹಾಗೂ ಅಧ್ಯಕ್ಷತೆ ವಹಿಸಿದ್ದ ಮುಲ್ಕಿ ಅರಮನೆ ಯ ಎಂ ದುಗ್ಗಣ್ಣ ಸಾವಂತರು ಸಂಭ್ರಮದ ನುಡಿಗಳನ್ನು ವ್ಯಕ್ತಪಡಿಸಿದರು.

ಸ್ಥಾಪನೆ ವರ್ಷದ ಮೌಲ್ಯಯುತ ಸದಸ್ಯರು, ಸಿಬ್ಬಂದಿಗಳಿಗೆ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಮತಾ ಗಟ್ಟಿ ಗೌರವ ಸಮರ್ಪಿಸಿದರು. ಪಾವಂಜೆ ದೇವಾಲಯದ ಅಧ್ಯಕ್ಷ ಬಿ ಸೂರ್ಯ ಕುಮಾರ್ ಗೋಲ್ಡ್ ಪ್ಯೂರಿಟಿ ಟೆಸ್ಟಿಂಗ್ ಮೆಷಿನ್ ಉದ್ಘಾಟನೆ ನೆರವೇರಿಸಿದರು.

ವೇದಿಕೆಯಲ್ಲಿ ಮುಲ್ಕಿ ಕಾರ್ನಾಡು ಚರ್ಚ್ ನ ಪೌಲ್ ರೋಲ್ಫಿ ಡಿಕೋಸ್ತ, ಉಪಾಧ್ಯಕ್ಷ ವಿಜಯಕುಮಾರ್ ಸನಿಲ್, ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಪೂಜಾರಿ ಉಪಸ್ಥಿತರಿದ್ದರು. ಸೊಸೈಟಿಯ ಅಧ್ಯಕ್ಷ ಎಚ್ ವಸಂತ್ ಬೆರ್ನಾರ್ಡ್ ಸ್ವಾಗತಿಸಿದರು. ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here