ಮುಂಡಾಜೆ : ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಜೂ 23 ರಂದು ಮುಂಡಾಜೆ ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಯಿತು.
ಬಿಜೆಪಿ ಬೆಳ್ತಂಗಡಿ ಮಂಡಲ ಉಪಾಧ್ಯಕ್ಷರಾದ ಕೊರಗಪ್ಪ ಗೌಡ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಜನಸಾಮಾನ್ಯರಿಗೆ ಆಗುತ್ತಿರುವ ಸಮಸ್ಯೆಗಳನ್ನು ಶೀಘ್ರ ಬಗೆಹರಿಸುವಂತೆ ಆಗ್ರಹಿಸಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರ ಮುಖಾಂತರ ರಾಜ್ಯ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುಮಲತಾ ಶೆಟ್ಟಿ, ಸದಸ್ಯರಾದ ರಾಮಣ್ಣ ಶೆಟ್ಟಿ, ಅಶ್ವಿನಿ, ವಿಶ್ವನಾಥ್ ಶೆಟ್ಟಿ ಮುಂಡ್ರುಪ್ಪಾಡಿ,ವಿಮಲಾ ಶೇಖರ್,ಯಶೋದಾ, ರವಿಚಂದ್ರ, ರಂಜಿನಿ, ದಿಶಾ ಪಠವರ್ಧನ್, ಸಿಎ ಬ್ಯಾಂಕ್ ನಿರ್ದೇಶಕರಾದ ಕಜೆ ವೆಂಕಟೇಶ್ ಭಟ್,ಅಶ್ವಿನಿ ಹೆಬ್ಬಾರ್ ಹಾಗೂ ರವಿ ಪೂಜಾರಿ,ಬಿಜೆಪಿ ಬೆಳ್ತಂಗಡಿ ಮಂಡಲದ ಉಪಾಧ್ಯಕ್ಷರಾದ ಚೆನ್ನಕೇಶವ್ ಅರಸಮಜಲು, ಅಲ್ಪ ಸಂಖ್ಯಾತ ಮೋರ್ಚಾ ದ ಅಧ್ಯಕ್ಷರಾದ ಸೆಬಾಸ್ಟಿಯನ್, ಮಂಡಲ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ಪೂರ್ಣಿಮಾ ಜಯಂತ್ ಸೇರಿಂದಂತೆ ಬಿಜೆಪಿ ಪಕ್ಷದ ಬೂತ್ ಸಮಿತಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು,ಪದಾಧಿಕಾರಿಗಳು, ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.