ಕೊಯ್ಯೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಜನವಿರೋಧಿ ನೀತಿಗಳನ್ನು ಖಂಡಿಸಿ ಜೂ 23 ರಂದು ಕೊಯ್ಯೂರು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಹಲವಾರು ಕಾರ್ಯಕರ್ತರುಗಳು ಭಾಗವಹಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು..
ಈ ಸಂದರ್ಭದಲ್ಲಿ ಗೀತಾ ರಾಮಣ್ಣ ಗೌಡರವರು ಪ್ರಸ್ತಾವಿಕ ಭಾಷಣದಲ್ಲಿಯೆ ಸರಕಾರದ ವಿರುದ್ದ ಕಿಡಿಕಾರಿದರು.ಪ್ರಭಾಕರ ಶೆಟ್ಟಿ ಉಪ್ಪಡ್ಕ ಇವರು ಮಾತನಾಡಿ 9/11 ನಿವೇಶನ, ಅಕ್ರಮ ಸಕ್ರಮ ತಿರಸ್ಕರಣೆ, ವಿದ್ಯುತ್ ದರ ಏರಿಕೆ, ಬಡವರ ಆಶ್ರಯ ಮನೆಗಳ ಮಂಜೂರಾತಿ, ವೃದ್ಧಾಪ್ಯ ವೇತನ, ಸಂಧ್ಯ ಸುರಕ್ಷಾ ಯೋಜನೆ ಹಣ ಬಿಡುಗಡೆ ಇಂತಹ ಹತ್ತು ಹಲವು ಸಮಸ್ಯೆಗಳ ಮೂಲಕ ಬಡವರ ಪಾಲಿಗೆ ಹೊರೆಯಾದ ಜನ ವಿರೋಧಿ ಕಾಂಗ್ರೆಸ್ ಸರಕಾರವನ್ನು ಕಟುವಾಗಿ ಖಂಡಿಸಿದರು.ಕೊಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯಿತಿ ಸದಸ್ಯರುಗಳು, ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರು, ಕೊಯ್ಯೂರು ಕೃಷಿ ಪತ್ತಿನ ಸಹಕಾರ ಸಂಘ ನಿರ್ದೇಶಕರು, ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು,ಹಾಗೂ ನಾಗರಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕೊಯ್ಯೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರ ಮುಖಾಂತರ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಲಾಯಿತು.ಕಾರ್ಯಕ್ರಮವನ್ನು ತಾರಾನಾಥ ಗೌಡ ಮೇಗಿನಬಜಿಲ ಇವರು ಸ್ವಾಗತಿಸಿ, ದಾಮೋದರ ಗೌಡ ಬೆರ್ಕೆ ವಂದಿಸಿದರು.