ಬೆಂಗಳೂರು,ಜೂ.25: ವಿಶ್ವ ತೊನ್ನು ರೋಗ ದಿನದ ಅಂಗವಾಗಿ ರಾಜಾಜಿನಗರ ಇ ಎಸ್ ಐ ಸಿ ಆಸ್ಪತ್ರೆಯ ಆವರಣದಲ್ಲಿ ಜನ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈ ವೇಳೆ ವೈದ್ಯಕೀಯ ವಿದ್ಯಾರ್ಥಿಗಳಿಂದ ತೊನ್ನು ರೋಗದ ಬಗ್ಗೆ ಕಿರು ನಾಟಕ ಪ್ರದರ್ಶಿಸಿದರು. ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು, ರೋಗಿಗಳು, ವಿದ್ಯಾರ್ಥಿಗಳು, ಭಾಗವಹಿಸಿದ್ದರು.
ಇ.ಎಸ್.ಐ.ಸಿ ಆಸ್ಪತ್ರೆಯ ಡಾ ಡೀನ್ ಸಂಧ್ಯಾ ಆರ್, ವೈದ್ಯಕೀಯ ಅಧೀಕ್ಷಕರಾದ ಡಾ ಸಿ. ಜಿ ಎಸ್ ಪ್ರಸಾದ್,ನಿರ್ದೇಶಕರಾದ ಮೆರಿಲ್ ಜಾರ್ಜ್, ಡಿಎಂಎಸ್ ಡಾ ಶಾಂತಿನಿ, ಚರ್ಮ ರೋಗ ವಿಭಾಗದ ಡಾ ಗಿರೀಶ್ ಎಂ. ಎಸ್,ಡಾ ರಘುನಾಥ್,ಡಾ ರಾಜೇಶ್,ಡಾ ಚೇತನ್, ಡಾ ವಿಜಯ ಲಕ್ಷ್ಮೀ, ಡಾ ವಿದ್ಯಾ ಶ್ರೀ, ಡಾ ಆಕಾಶ್, ಡಾ ತಾನ್ಯ ಮತ್ತಿತರರು ಉಪಸ್ಥಿತರಿದ್ದರು.