ದಿ. ಮೀರಾ ಕಾಮತ್ ಸ್ಮರಣಾರ್ಥ ಗಣಕಯಂತ್ರ ಕೊಠಡಿಯನ್ನು ಶ್ರೀಯುತ ಕಮಲಾಕ್ಷ ಕಾಮತ್ ನಿವೃತ್ತ ಲೆಕ್ಕ ಪರಿಶೋಧಕರು ಉದ್ಘಾಟಿಸಿ ಶಾಲೆಗೆ ಹಸ್ತಾಂತರಿಸಿದರು. ತಮ್ಮ ಧರ್ಮಪತ್ನಿಯ ಸವಿ ನೆನಪಿಗಾಗಿ ಶಾಲೆಗೆ ಮೂರು ಗಣಕಯಂತ್ರ , ಪ್ರಿಂಟರ್‌ನ್ನು ಕೊಡುಗೆಯಾಗಿ ನೀಡಿದರು.
ಸಮಾರಂಭದಲ್ಲಿ ಶ್ರೀಮತಿ ಸುನೀತಾ ಅಧ್ಯಕ್ಷರು ಎಸ್.ಡಿ.ಎಂ.ಸಿ ಶ್ರೀ ಮಹಾಲಿಂಗೇಶ್ವರ ಅ.ಹಿ.ಪ್ರಾ. ಶಾಲೆ ನಕ್ರೆ ಅಧ್ಯಕ್ಷತೆಯನ್ನು ವಹಿಸಿದರು. ಶ್ರೀಯುತ ಎನ್. ಪ್ರಕಾಶ್ ಹೆಗ್ಡೆ ಸಂಚಾಲಕರು ಶ್ರೀ ಮಹಾಲಿಂಗೇಶ್ವರ ಅ. ಹಿ. ಪ್ರಾ. ಶಾಲೆ ನಕ್ರೆ, ಶ್ರೀಯುತ ವೈ. ಸುಂದರ ಹೆಗ್ಡೆ ನಿವೃತ್ತ ಶಿಕ್ಷಕರು,, ಶ್ರೀಯುತ ರಮೇಶ್ ನಾಯಕ್ ಶಿಕ್ಷಕರು ದುರ್ಗಾದೇವಿ ಅ.ಹಿ.ಪ್ರಾ.ಶಾಲೆ ಸಮಾಜಮಂದಿರ ಕುಕ್ಕುಂದೂರು, ಶ್ರೀಯುತ ಅರುಣ್ ಶೆಟ್ಟಿ ಗುರುವೈನ್ಸ್ ನಕ್ರೆ, ಶ್ರೀಮತಿ ಕ್ಯಾಥರೀನಾ ಫೆರ್ನಾಂಡಿಸ್ ಗ್ರಾಮ ಪಂಚಾಯತ್ ಸದಸ್ಯರು, ಶ್ರೀಯುತ ಅಂತೋನಿ ಡಿಸೋಜ ಗ್ರಾಮ ಪಂಚಾಯತ್ ಸದಸ್ಯರು, ಶ್ರೀಮತಿ ಪ್ರೀತಿವಾತ್ಸಲ್ಯ ಮುಖ್ಯ ಶಿಕ್ಷಕರು ಮಹಾಲಿಂಗೇಶ್ವರ ಅ. ಹಿ. ಪ್ರಾ ಶಾಲೆ ನಕ್ರೆ ಉಪಸ್ಥಿತಿ ಇದ್ದರು, ಶ್ರೀಯುತ ಶಂಕರ್ ಪೂಜಾರಿ ಧನ್ಯವಾದ ಸಲ್ಲಿಸಿದರು. ಬೆಳಿಗ್ಗಿನ ಉಪಹಾರ ವ್ಯವಸ್ಥೆಯನ್ನು ಶ್ರೀಯುತ ಕಮಲಾಕ್ಷ ಕಾಮತ್ ಮತ್ತು ಮಧುಕರ ಸುವರ್ಣ ಶಮಾ ಎಂಟರ್ಪ್ರೈಸಸ್ ತಾಲೂಕು ಬಳಿ ಕಾರ್ಕಳ ಇವರು ನೀಡಿ ಕಾರ್ಯಕ್ರಮಕ್ಕೆ ಸಹಕರಿಸಿದರು.