ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.),ಕನ್ನಡ ಗ್ರಾಮ, ಕಾಸರಗೋಡು ಇದರ 36ನೇ ಸಂಸ್ಥಾಪನಾ ವರ್ಷಾಚರಣೆಯ ಪ್ರಯುಕ್ತ ಕೇರಳ ರಾಜ್ಯ ಸಹಿತ ಕಾಸರಗೋಡು ಜಿಲ್ಲಾ ಕನ್ನಡಪರ ಸಂಘಟನೆಗಳ ವಿಳಾಸದ ಡೈರೆಕ್ಟರಿಯ 2 ನೇ ಪರಿಷ್ಕೃತ ಆವೃತ್ತಿಯನ್ನು ಪ್ರಕಟಿಸಲು ನಿರ್ಧರಿಸಲಾಗಿದೆ.
ಕೇರಳ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಕಾಸರಗೋಡು ಜಿಲ್ಲೆಯಲ್ಲಿರುವ ಸುಮಾರು 500 ರಷ್ಟು ಕನ್ನಡ ಸಂಘ ಸಂಸ್ಥೆಗಳು ಮತ್ತು ಇತರ ಉಪಭಾಷೆಯ ಸಾಹಿತ್ಯಿಕ ಸಾಂಸ್ಕೃತಿಕ, ಸಾಮಾಜಿಕ, ಕನ್ನಡಪರ ಸಂಘಟನೆಗಳು ಹಾಗೂ ಸಾರ್ವಜನಿಕ ಸ್ವಯಂಸೇವಾ ಸಂಘ ಸಂಸ್ಥೆಗಳು, ಸುಮಾರು 500 ರಷ್ಟು ಭಜನಾ ಸಂಘ,ಭಜನಾ ಮಂಡಳಿ,ಭಜನಾ ಮಂದಿರಗಳು ಮತ್ತು ಸುಮಾರು 200 ರಷ್ಟು ಕೇರಳ ಸರಕಾರದ ಕನ್ನಡ ಶಾಲಾ ಕಾಲೇಜುಗಳು ಖಾಸಗಿ ಕನ್ನಡ ಶಾಲೆ ಕಾಲೇಜುಗಳ ಹೆಸರು, ಪೂರ್ಣ ವಿಳಾಸ,ಮೊಬೈಲ್ ವಾಟ್ಸ್ ಪ್ ಸಂಖ್ಯೆ,ಇ- ಮೇಲ್, ಸ್ಥಾಪನೆಯಾದ ವರ್ಷ, ನೋಂದಣಿ ಸಂಖ್ಯೆ ಇತರ ಚುಟುಕು ಮಾಹಿತಿಯೊಂದಿಗೆ ಸಂಕ್ಷಿಪ್ತ ವಿವರಗಳು ಮತ್ತು ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ ಹಾಗೂ ಪದಾಧಿಕಾರಿಗಳ ಹೆಸರು, ಮನೆ ವಿಳಾಸಗಳನ್ನು ಲೆಟರ್ ಹೆಡ್ ನಲ್ಲಿ ಪ್ರತ್ಯೇಕವಾಗಿ ಬರೆದು 2026 ಅಗಸ್ಟ್ 30ರ ಮುಂಚಿತವಾಗಿ ಅಂಚೆ ಮೂಲಕ ಕಳುಹಿಸಲು ವಿನಂತಿಸಲಾಗಿದೆ.
ಸಂಪರ್ಕ ವಿಳಾಸ :- ಶಿವರಾಮ ಕಾಸರಗೋಡು, ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ. ),ಕನ್ನಡ ಗ್ರಾಮ, ಕನ್ನಡ ಗ್ರಾಮ ರಸ್ತೆ, ಕಾಸರಗೋಡು -671121
ಮೊಬೈಲ್ :9448572016,
9901951965
Email :-Shivaramakasaragod @gmail.com

