ಪುತ್ತೂರು : ಕಪ್ಪತ್ತಗಿರಿ ಸಾಹಿತ್ಯ ಶಿಕ್ಷಣ ಹಾಗು ಸಾಂಸ್ಕೃತಿಕ ಕಲಾ ವೇದಿಕೆ ರಾಜ್ಯ ಘಟಕ ಕಳಸಾಪೂರ -ಗದಗ ಜಿಲ್ಲೆ ಇದರ ವತಿಯಿಂದ ದಿನಾಂಕ :21.6.2026ರಂದು ನಡೆಯುವ ವಿಶ್ವ ಪರಿಸರ ದಿನಾಚರಣೆ, ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ನಡೆಯುವ ರಾಷ್ಟ್ರ ಮಟ್ಟದ ಕಾವ್ಯೋತ್ಸವ -2026 ಕವಿಗೋಷ್ಠಿ ಗೆ ಪುತ್ತೂರು ವಿವೇಕಾನಂದ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಲ್ಯಾಬ್ ಸಹಾಯಕ ಶ್ರೀ ನಾರಾಯಣ ಕುಂಬ್ರ ಆಯ್ಕೆಯಾಗಿರುತ್ತಾರೆಂದು ಕಪ್ಪತ್ತಗಿರಿ ಸಾಹಿತ್ಯ ಶಿಕ್ಷಣ ಹಾಗು ಸಾಂಸ್ಕೃತಿಕ ಕಲಾವೇದಿಕೆ ಅಧ್ಯಕ್ಷರಾಗಿರುವ ಚಂದ್ರಕಲಾ ಮ ಇಟಗಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇವರು ಕವಿಯಾಗಿ, ಸಂಘಟಕರಾಗಿದ್ದು,ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಕಾರ್ಯಕ್ರಮ ಸಂಯೋಜಕರಾಗಿ,ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕವಿಗೋಷ್ಠಿ ಅಧ್ಯಕ್ಷತೆಯನ್ನು ಸಾಹಿತಿಗಳು ಮತ್ತು ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾಗಿರುವ ಡಾ. ಪಂಚಯ್ಯ ರಾ ಹಿರೇಮಠ್ ವಹಿಸಲಿದ್ದು ರಾಜ್ಯದ ವಿವಿಧ ಜಿಲ್ಲೆಗಳಿಂದ ಕವಿಗಳು ಆಗಮಿಸಲಿದ್ದಾರೆ.

