ಪುಚ್ಚೆಮೊಗರು: ಗ್ರಾಮೀಣ ಪರಿಸರ ಸಂರಕ್ಷಣೆ, ಉನ್ನತಿ

0
83

ಮೂಡುಬಿದಿರೆ ತಾಲೂಕಿನ ಹೊಸಬೆಟ್ಟು ಗ್ರಾಮದ ಪುಚ್ಚೆಮೊಗರು ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಜೂನ್ 20 ರಂದು ಗ್ರಾಮೀಣ ಪರಿಸರ ಸಂರಕ್ಷಣೆ, ಉನ್ನತಿಯ ಅವಕಾಶದ ಸಾಧ್ಯತೆಯ ಮಾಹಿತಿ ಒದಗಿಸಲಾಯಿತು. ಬೆಂಗಳೂರು ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ಸಂಪನ್ಮೂಲ ವ್ಯಕ್ತಿ, ಪತ್ರಿಕಾ ವರದಿಗಾರ ರಾಯಿ ರಾಜಕುಮಾರ ಮೂಡುಬಿದಿರೆ ಯವರು ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ, ಪಕ್ಷಿ ಪ್ರಾಣಿ ಗಳ ಜೀವರಕ್ಷಕದ ಬಗ್ಗೆ ತಿಳಿಸಿದರು. ಪ್ಲಾಸ್ಟಿಕ್ ನಿಂದಾಗಿ ಉಂಟಾಗುವ ಜೀವ ಹಾನಿಗಳ ಹಲವಾರು ಉದಾಹರಣೆಗಳನ್ನು ಪ್ರಸ್ತುತ ಪಡಿಸಿದರು. ಗ್ರಾಮ ಪಂಚಾಯತ್ ನನ್ನು ಎಚ್ಚರಿಸುವ ಮೂಲಕ ಸ್ವತಃ ತಮ್ಮ ಊರಿನ, ಶಾಲೆಯ ಉನ್ನತಿಯ ಅವಕಾಶವನ್ನು ಬಳಸಿಕೊಳ್ಳಲು ಕೇಳಿಕೊಂಡರು.
ಮುಖ್ಯ ಶಿಕ್ಷಕಿ ವಸಂತಿ ಸ್ವಾಗತಿಸಿದರು. ಶಿಕ್ಷಕ ಸುಕುಮಾರ್, ಕ್ಲಾರಾ, ಪೂಜಾ ಕಾರ್ಯಕ್ರಮ ಸಂಘಟಿಸಿದರು, ಶಿಕ್ಷಕಿ ಮೆಲ್ ರಿಯಾ ವಂದಿಸಿದರು.

LEAVE A REPLY

Please enter your comment!
Please enter your name here