ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ವತಿಯಿಂದ ಜೂನ್ ಒಂದರಂದು ಪಿ. ಎಂ. ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಕೆ. ಎಸ್ ರಾವ್ ನಗರ, ಕಾರ್ನಾಡ್ ಮೂಲ್ಕಿಯಲ್ಲಿ ಅದ್ದೂರಿ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಮಕ್ಕಳಿಗೆ ಉಚಿತ ಪುಸ್ತಕ, ಸಮವಸ್ತ್ರ ವಿತರಣೆಯ ಜೊತೆಗೆ ಕ್ಲಬ್ ವತಿಯಿಂದ ಪೆನ್ಸಿಲ್ ಗಳನ್ನು ಹಂಚಲಾಯಿತು.
ಈ. ಸಂದರ್ಭದಲ್ಲಿ ಕ್ಲಬ್ ನಿಯೋಜಿತ ಅಧ್ಯಕ್ಷರಾದ ಕಲ್ಲಪ್ಪ ತಡವಲಗ, ಮಾಜೀ ಅಧ್ಯಕ್ಷರಾದ ಸುಧೀರ್ ಬಾಳಿಗ, ನಿಯೋಜಿತ ಕಾರ್ಯದರ್ಶಿ ಪುಷ್ಪರಾಜ್ ಚೌಟ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ದಿನೇಶ್ ಕೆ, ಹರಿಪ್ರಸಾದ್ ಶೆಟ್ಟಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಪೋಷಕರು-ಶಿಕ್ಷಕರು ವಿದ್ಯಾರ್ಥಿಗಳ ಜಾಥಾದಲ್ಲಿ ಭಾಗವಹಿಸಿ, UKG, LKG ಮಕ್ಕಳಿಗೆ ಪುಷ್ಪಸ್ವಾಗತ, ಸಿಹಿ ಹಂಚುವ ಮೂಲಕ ಶಾಲಾರಂಭದ ದಿನದಂದು ಮಕ್ಕಳ ಮುಖದಲ್ಲಿ ಸಂತಸ ಮೂಡಿಸಲಾಯಿತು.

