ಪುಷ್ಪ ಪ್ರಸಾದ್ ರವರ ಸುಖ ಧರೆ ಕೃತಿ ಲೋಕಾರ್ಪಣೆ

0
12

ಪರ್ಯಾಯ ಶಿರೂರು ಮಠ ಉಡುಪಿ ಮತ್ತು ಕಥಾಬಿಂದು ಪ್ರಕಾಶನ ಇವುಗಳ ಆಶ್ರಯದಲ್ಲಿ ದಿನಾಂಕ 12-04-2026ರಂದು ಅರ್ಥಪೂರ್ಣವಾದ ಸಾಹಿತ್ಯ ಸಮ್ಮೇಳನ ಪ್ರತಿಷ್ಠಿತ ರಾಜಾಂಗಣದಲ್ಲಿ ಜರುಗಿತು. ಈ ಸಾಹಿತ್ಯ ಕಾರ್ಯಕ್ರಮದಲ್ಲಿ ಶ್ರೀಮತಿ ಪುಷ್ಪ ಪ್ರಸಾದ್ ರವರ ಸುಖ ಧರೆ ಕೃತಿ ಲೋಕಾರ್ಪಣೆಗೊಂಡಿತು. ಜೊತೆಗೆ ಸರಿತಾ ಅಂಬರೀಷ್, ವೀಣಾ ಪ್ರಭಾಕರ್, ಶಾಲಿನಿ ಕೆಮ್ಮಣ್ಣು, ಚೇಂಪಿ ದಿನೇಶ್ ಆಚಾರ್ಯ ಹಾಗೂ ಇನ್ನಿತರ ಸಾಹಿತಿಗಳ ಒಟ್ಟು 20 ಕೃತಿಗಳು ಲೋಕಾರ್ಪಣೆಗೊಂಡವು. ಇದೇ ಸಂದರ್ಭದಲ್ಲಿ ಗೀತಾ ಮಂದಿರ ಉಡುಪಿಯ ಸಂಚಾಲಕರಾದ ವಿದ್ವಾನ್ ಶ್ರೀ ಕೆ ವಿ ರಮಣಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಶ್ರೀ ಬಾಲಕೃಷ್ಣ ಭಾಗವತ್ ಶ್ರೀಮಠದ ಕಡೆಯಿಂದ ಆಗಮಿಸಿದ್ದರು. ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು ಅವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಶ್ರೀ ಬಿ.ಕೆ ಮಾಧವರಾವ್ ತಮ್ಮ ಚಿತ್ರಕಲಾ ಸಾಧನೆಗೆ ರಾಜ್ಯಮಟ್ಟದ ಕಲಾ ತಿಲಕ ಪ್ರಶಸ್ತಿಗೆ ಭಾಜನರಾದರು. ಗಾಯನ ಕ್ಷೇತ್ರದಲ್ಲಿ ಮೇರು ಗಾಯಕಿ ಶ್ರೀಮತಿ ಪುಷ್ಪ ಆರಾಧ್ಯ, ಶಿವಾನಂದ ಸುರವಸೆ (ಸಂಗೀತ), ಚೇರ್ಕಾಡಿ ಸಚ್ಚಿದಾನಂದಶೆಟ್ಟಿ (ಸಾಹಿತ್ಯ), ಡಾ. ಬಾಲಕೃಷ್ಣ ಎಸ್ ಮುದ್ದೋಡಿ(ತಾಂತ್ರಿಕ), ಗಣೇಶ್ ಕುಮಾರ್ (ಕಲಾ ಸಾಧನೆ), ಸಂಧ್ಯಾ ರಾಣಿ ಟೀಚರ್ (ಕನ್ನಡ ಪೋಷಣೆ), ಕೆ ಲಕ್ಷ್ಮಿ (ಸಾಹಿತ್ಯ ಮತ್ತು ನಾಣ್ಯ ಸಂಗ್ರಹ), ಶೋಭ ಹರಿಪ್ರಸಾದ್ (ಸಾಹಿತ್ಯ), ಕುಸುಮಾ ಹತ್ಯಾಳ (ಸಾಹಿತ್ಯ), ಸುಮಕಿರಣ್ (ಸಾಹಿತ್ಯ), ಅಯನ ವಿ ರಮಣ(ಬಹುಮುಖ ಪ್ರತಿಭೆ), ಕು. ವಂಶಿ ವೈ ಕೋಟ್ಯಾನ್ (ನೃತ್ಯ) ಇವರುಗಳು ಕೃಷ್ಣಾನುಗ್ರಹ ರಾಜ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಶ್ರೀ ಪ್ರದೀಪ್ ಕುಮಾರ್ ಕಲ್ಕೂರ (ಮಾಜಿ ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು), ಭುವನಾಧಿರಾಮ ಉಡುಪ (ಮಾಸಪತ್ರಿಕೆಯ ಸಂಪಾದಕರು), ಡಾ. ವಾಮನರಾವ್ ಬೇಕಲ್ (ಕನ್ನಡ ಭವನ ಖ್ಯಾತಿ), ಶ್ರೀ ಜಯಾನಂದ ಪೆರಾಜೆ (ಪತ್ರಕರ್ತರು ಮತ್ತು ನಿವೃತ್ತ ಶಿಕ್ಷಕರು), ಡಾ. ಕೊಳ್ಚಪ್ಪೆ ಗೋವಿಂದ ಭಟ್ (ಸಾಹಿತ್ಯ ಪ್ರವರ್ತಕರು), ಮತ್ತು ಪಿ.ವಿ ಪ್ರದೀಪ್ ಕುಮಾರ್ (ಕಾದಂಬರಿಕಾರ ಮತ್ತು ಪ್ರಕಾಶಕರು) ಅತಿಥಿಗಳಾಗಿ ವೇದಿಕೆಯಲ್ಲಿದ್ದರು. ಶ್ರೀಮತಿ ಪುಷ್ಪ ಪ್ರಸಾದ್, ಶ್ರೀ ದೇವಿಪ್ರಸಾದ್, ಶ್ರೀ ಚೇಂಪಿ ದಿನೇಶ್ ಆಚಾರ್ಯ, ಶ್ರೀಮತಿ ಶೋಭ ದಿನೇಶ್ ಉದ್ಯಾವರ, ಶ್ರೀಮತಿ ವೀಣಾ ಪ್ರಭಾಕರ ಕಡೆಕಾರ್, ಶ್ರೀಮತಿ ಸರಿತಾ ಅಂಬರೀಷ್ ಕುತ್ಪಾಡಿ, ಕು.ವಿಶ್ರುತ ಮತ್ತು ವಿಧಿತ್ ಎಂ ಸಕ್ರಿಯವಾಗಿ ಸಹಕರಿಸಿದರು. ವಾಸಂತಿ ಅಂಬಲಪಾಡಿ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಸುಮಾರು 30 ಕವಿಗಳು ಕಾವ್ಯಗೋಷ್ಠಿಯಲ್ಲಿ ಭಾಗವಹಿಸಿದರು. ಡಾ ಶಾಂತ ಪುತ್ತೂರು ಅತಿಥಿಗಳಾಗಿದ್ದರು. ಶ್ರೀ ಚೇಂಪಿ ದಿನೇಶ್ ಆಚಾರ್ಯ ಹಾಗೂ ಶ್ರೀಮತಿ ದಿವ್ಯ ಮಯ್ಯ ಸ್ವಾಗತ ಹಾಗೂ ವಂದನಾರ್ಪಣೆಯನ್ನು ನೆರವೇರಿಸಿದರು. ಶ್ರೀಮತಿ ಲಕ್ಷ್ಮಿ ವಿ ಭಟ್, ಶ್ರೀಮತಿ ಪುಷ್ಪ ಪ್ರಸಾದ್, ಶ್ರೀಮತಿ ಸರಿತಾ ಅಂಬರೀಷ್ ಕುತ್ಪಾಡಿ ಇವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here