ಹಣದ ವಿಚಾರದಲ್ಲಿ ಮಂಗಳಮುಖಿಯರ ನಡುವೆ ಜಗಳ

0
53

ಮಂಡ್ಯ, : ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ಗ್ರಾಮದಲ್ಲಿ ಮಂಗಳಮುಖಿಯರ ನಡುವೆ ಬಿಗ್​​​ ಫೈಟ್​​​​​​ ನಡೆದಿದೆ. ಹಣ ಹಂಚಿಕೆ ವಿಚಾರಕ್ಕೆ ಮೈಸೂರು ಮತ್ತು ಮಂಡ್ಯದ ಮಂಗಳಮುಖಿಯರ ಗುಂಪುಗಳ ಮಧ್ಯೆ ಗಲಾಟೆ​ ನಡೆದಿದೆ. ಎರಡು ಕಡೆಯವರು ಸಾರ್ವಜನಿಕ ಸ್ಥಳದಲ್ಲಿ ಸಿಕ್ಕ ಸಿಕ್ಕ ವಸ್ತುಗಳಿಂದ ಮನಬಂದಂತೆ ಬಡಿದಾಡಿಕೊಂಡಿದ್ದಾರೆ. ಇವರ ಗಲಾಟೆಯಿಂದ ಸಾರ್ವಜನಿಕ ವಸ್ತುಗಳಿಗೆ ಹಾನಿಯಾಗಿದೆ. ಜತೆಗೆ ಅಲ್ಲಿನ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಪ್ರತಿದಿನ ಈ ಮಂಗಳಮುಖಿಯರ ಜಗಳ ನಡೆಯುತ್ತಿರುತ್ತದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಇದೀಗ ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ದೂರು ಕೂಡ ನೀಡಲಾಗಿದೆ.

LEAVE A REPLY

Please enter your comment!
Please enter your name here