ಫ್ರೆಂಡ್ಸ್ ಇಲೆವೆನ್ ಬೆದ್ರ ರಘುವೀರ್ ದೇವಾಡಿಗ ಅಧ್ಯಕ್ಷ ಹಾಗೂ ಅಶ್ವಿನ್ ಪಿರೇರಾ ಗೌರವಾಧ್ಯಕ್ಷರಾಗಿ ನೇಮಕ

0
20

ಮೂಡುಬಿದಿರೆ : ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಫ್ರೆಂಡ್ಸ್ ಇಲೆವೆನ್ ಬೆದ್ರ ಸಂಘಟನೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಸಂಘಟನೆಯ ಅಧಿಕೃತ ಲೋಗೋ ಅನಾವರಣ ಕಾರ್ಯಕ್ರಮವು ಸಮಾಜ ಮಂದಿರದಲ್ಲಿ ವಿಜೃಂಭಣೆಯಿಂದ ನಡೆಯಿತು.

ಸಂಘಟನೆಯ ಅಧ್ಯಕ್ಷರಾಗಿ ರಘುವೀರ್ ದೇವಾಡಿಗ ಹಾಗೂ ಗೌರವಾಧ್ಯಕ್ಷರಾಗಿ ಅಶ್ವಿನ್ ಜೆ. ಪಿರೇರಾ ಅಧಿಕಾರ ಸ್ವೀಕರಿಸಿದರು.

ಇದೇ ವೇಳೆ ಉಪಾಧ್ಯಕ್ಷರಾಗಿ ಪ್ರಸನ್ನ ಹೆಗ್ಡೆ ಮತ್ತು ರಘುಪತಿ, ಕಾರ್ಯದರ್ಶಿಯಾಗಿ ಜಯರಾಮ, ಜೊತೆ ಕಾರ್ಯದರ್ಶಿಗಳಾಗಿ ಅಖಿಲ್ ಸಾಲ್ಯಾನ್ ಮತ್ತು ಐವನ್, ಖಜಾಂಚಿಯಾಗಿ ಸುಧೀಂದ್ರ ಭಟ್, ಕ್ರೀಡಾ ಕಾರ್ಯದರ್ಶಿಗಳಾಗಿ ಹರೀಶ್ (ಗಜ) ಮತ್ತು ಪ್ರೆಸ್ಲಿ, ಹಾಗೂ ಸಂಘಟನಾ ಕಾರ್ಯದರ್ಶಿಗಳಾಗಿ ಸಂತೋಷ್ ಕುಮಾರ್ ಮತ್ತು ಪ್ರವೀಣ್ ಗಾಣಿಗ ಆಯ್ಕೆಯಾಗಿದ್ದಾರೆ.