‘ರಾಮಾಂಜನೇಯ ಕಾಳಗ’ ಯಕ್ಷಗಾನ ಪ್ರದರ್ಶನ : ಜರ್ನಿ ಥೇಟರ್ ಗ್ರೂಪ್‌ನಿಂದ ಯಶಸ್ವಿ ರಂಗಾರ್ಪಣೆ

0
4

ಮಂಗಳೂರು : ಮಂಗಳೂರಿನ ಜರ್ನಿ ಥೇಟರ್ ಗ್ರೂಪ್ ವತಿಯಿಂದ ಜೂನ್ 6ರಂದು ಸಂತ ಅಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾನಿಲಯದ ಎಲ್.ಸಿ.ಆರ್.ಐ ಸಭಾಂಗಣದಲ್ಲಿ ‘ರಾಮಾಂಜನೇಯ ಕಾಳಗ’ ಯಕ್ಷಗಾನ ಪ್ರದರ್ಶನ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಯಕ್ಷಗಾನ ಅಭಿಮಾನಿ ಸದಾಶಿವ ಉಚ್ಚಿಲ್, “ಯಕ್ಷಗಾನ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿರುವ ಇಂದಿನ ಸಂದರ್ಭದಲ್ಲಿ, ರಂಗಭೂಮಿ ಹಿನ್ನೆಲೆಯ ಕಲಾವಿದರಿಂದ ಮೂಡಿಬರುತ್ತಿರುವ ಈ ಪ್ರದರ್ಶನ ಹೊಸ ಭರವಸೆ ಮೂಡಿಸಿದೆ. ಗಾಯನ, ಕುಣಿತ ಮತ್ತು ಸಂಭಾಷಣೆಯಲ್ಲಿ ವೈಯಕ್ತಿಕ ವೈಭವೀಕರಣ ಹೆಚ್ಚುತ್ತಿರುವ ಕಾಲಘಟ್ಟದಲ್ಲಿ ಜರ್ನಿ ಥೇಟರ್ ಗ್ರೂಪ್‌ನ ಪ್ರಯತ್ನ ಗಮನಾರ್ಹವಾಗಿದೆ” ಎಂದು ಹೇಳಿದರು.

ಯಕ್ಷಗಾನದ ನಿರ್ದೇಶಕರಾದ ಸುನಿಲ್ ಪಲ್ಲಮಜಲು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರದರ್ಶನದ ಉದ್ದೇಶ ಹಾಗೂ ತಂಡದ ಕಲಾತ್ಮಕ ಪ್ರಯತ್ನಗಳ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯದ ಸಹ ಕುಲಪತಿ ರೆವ್. ಫಾದರ್ ಡಾ. ಮೆಲ್ವಿನ್ ಡಿಕುನ್ಹ, ಜರ್ನಿ ಥೇಟರ್ ಗ್ರೂಪ್‌ನ ಶಶಾಂಕ್ ಐತಾಳ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ತಂಡದ ಸದಸ್ಯೆ ಚಿನ್ಮಯಿ ವಿ. ಭಟ್ ನಿರೂಪಿಸಿದರು.

ಬಳಿಕ ಜರ್ನಿ ಥೇಟರ್ ಗ್ರೂಪ್‌ನ ಸದಸ್ಯರಿಂದ ‘ರಾಮಾಂಜನೇಯ ಕಾಳಗ’ ಯಕ್ಷಗಾನ ಪ್ರದರ್ಶನ ನಡೆಯಿತು. ಕಲಾವಿದರ ಅಭಿನಯ, ಸಂಭಾಷಣೆ ಹಾಗೂ ರಂಗ ನಿರ್ವಹಣೆಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಯಿತು.

LEAVE A REPLY

Please enter your comment!
Please enter your name here