ಕಾಸರಗೋಡು ಕನ್ನಡ ಭವನ ಗಡಿನಾಡಿನ ಕನ್ನಡ ಉಳಿಸುವ ಅಭಿಯಾನದಲ್ಲಿ ಮುಂಚೂಣಿಯಲ್ಲಿರುವ ಡಾ ವಾಮನ ರಾವ್ ರೂವಾರಿಯಾಗಿರುವ ಸಾಮಾಜಿಕ ಸಂಸ್ಥೆಯಾಗಿದೆ. ಸಂಸ್ಥೆಯ ಕೇಂದ್ರ ಸಮಿತಿಯು ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು, ನಿಕಟ ಪೂರ್ವ ಕಸಪ ಜಿಲ್ಲಾ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಉದ್ಯಮಿ ಶ್ರೀಪತಿ ಭಟ್ ಮೂಡುಬಿದಿರೆ ಮತ್ತು ಪತ್ರಿಕಾ ಸಂಪಾದಕ ಕೊಡತ್ತೂರು ಶ್ರೀ ಭುನನಾಭಿರಾಮ ಉಡುಪ ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಏಪ್ರಿಲ್ 18ರಂದು ಕಿನ್ನಿಗೋಳಿಯ ಯುಗಪುರುಷ ಸಭಾಂಗಣದಲ್ಲಿ ಅಪರಾಹ್ನ ಎರಡು ಗಂಟೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ ವಾಮನರಾವ್ ಬೇಕಲ್ ಮತ್ತು ಕಾರ್ಯದರ್ಶಿ ವಸಂತ ಕೆರೆಮನೆ ತಿಳಿಸಿದ್ದಾರೆ.