ತುಳುನಾಡು ಸೇರಿದಂತೆ ರಾಜ್ಯದ 6 ಜಿಲ್ಲೆಗಳಿಗೆ ಇಂದು ರೆಡ್ ಅಲರ್ಟ್, ಭಾರಿ ಮಳೆ ಸಾಧ್ಯತೆ

0
125

ಮಂಗಳೂರು: ಕರ್ನಾಟಕದಾದ್ಯಂತ ಇಂದಿನಿಂದ ಮುಂಗಾರು ಚುರುಕುಗೊಳ್ಳಲಿದ್ದು, ಮಲೆನಾಡು, ಕರಾವಳಿಯಲ್ಲಿ ಹೆಚ್ಚಿನ ಮಳೆಯಾಗಲಿದ್ದು, ರೆಡ್ ಅಲರ್ಟ್​ ಘೋಷಿಸಲಾಗಿದೆ. 

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್​ ಘೋಷಿಸಲಾಗಿದ್ದು, ಜುಲೈ 10ರವರೆಗೂ ಭಾರಿ ಮಳೆಯಾಗಲಿದೆ. ಬೆಳಗಾವಿ,ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದ್ದು, ಧಾರವಾಡಕ್ಕೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಬೀದರ್, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ.

ಎಲ್ಲೆಲ್ಲಿ ಮಳೆಯಾಗಿದೆ? 

ಕ್ಯಾಸಲ್​​ರಾಕ್, ಕೊಪ್ಪ, ಕಮ್ಮರಡಿ, ಆಗುಂಬೆ, ಕದ್ರಾ, ಸಿದ್ದಾಪುರ, ಜಯಪುರ, ಕೊಪ್ಪ, ಎನ್​ಆರ್​ಪುರ, ಬೆಳ್ತಂಗಡಿ, ಅಂಕೋಲಾ, ಮೂಡುಬಿದಿರೆ, ಕಾರವಾರ, ಧರ್ಮಸ್ಥಳ, ಶಿರಾಲಿ, ಸೋಮವಾರಪೇಟೆ, ಭಾಗಮಂಡಲ, ಲೋಂಡಾ, ಪುತ್ತೂರು, ಕಳಸ, ಜೋಯ್ಡಾ, ಕಾರ್ಕಳ, ಕುಮಟಾ, ಗೇರುಸೊಪ್ಪ, ಬನವಾಸಿಯಲ್ಲಿ ಭಾರಿ ಮಳೆಯಾಗಿದೆ.

ಮುಲ್ಕಿ, ಉಡುಪಿ, ಮಂಗಳೂರು, ಮಾಣಿ, ಕುಂದಾಪುರ, ಬಂಟವಾಳ, ಶಕ್ತಿನಗರ, ಮಾಣಿ, ಖಾನಾಪುರ, ಹುಂಚದಕಟ್ಟೆ, ನಾಪೋಕ್ಲು, ತ್ಯಾಗರ್ತಿ, ಚಿಕ್ಕಬಳ್ಳಾಪುರ, ದಾವಣಗೆರೆ, ಪೊನ್ನಂಪೇಟೆ, ಕೋಟಾ, ಹಿರೆಕೆರೂರು, ಸರಗೂರು, ಹೊನ್ನಾವರ, ಸಂಕೇಶ್ವರ, ಕಿತ್ತೂರು, ಕುಷ್ಟಗಿ, ಮುದಗಲ್, ಮಾನ್ವಿ, ಹಳಿಯಾಳ, ಮುಂಡಗೋಡ, ಚನ್ನಗಿರಿ, ನಾಯಕನಹಟ್ಟಿ, ಹಗರಿಬೊಮ್ಮನಹಳ್ಳಿ, ಬರಗೂರು, ಕುಶಾಲನಗರ, ಕೋಲಾರ, ಬೇಳೂರು, ಅಜ್ಜಂಪುರ, ಪರಶುರಾಂಪುರದಲ್ಲಿ ಮಳೆಯಾಗಿದೆ.

LEAVE A REPLY

Please enter your comment!
Please enter your name here