● ಹೊಸ ರೀಗಸ್ ಸೆಂಟರ್, ನಗರದಲ್ಲಿ 13ನೇ ಐ.ಡಬ್ಲ್ಯೂ.ಜಿ. ಉದ್ಯೋಗದ ಸ್ಥಳವಾಗಿದ್ದು ಗ್ಲೋಬಲ್ ಟೆಕ್ ಪಾರ್ಕ್, ಶೌಘ್ನೆಸ್ಸೀ ರಸ್ತೆ, ಲಾಂಗ್ ಫೋರ್ಡ್ ಟೌನ್, ಲಾಂಗ್ ಫೋರ್ಡ್ ಗಾರ್ಡನ್ಸ್, ಬೆಂಗಳೂರು, ಕರ್ನಾಟಕ ಇಲ್ಲಿದೆ
● ಎಲ್ಲ ಗಾತ್ರಗಳ ಕಂಪನಿಗಳೂ ಉದ್ಯೋಗಿಗಳಿಗೆ ಉತ್ಪಾದಕತೆ ಮತ್ತು ಉದ್ಯೋಗಿಯ ಸಂತೃಪ್ತಿ ಕಾಪಾಡಲು ತಾಣಗಳ ಜಾಲದ ಲಭ್ಯತೆ ನೀಡುತ್ತಿದ್ದು ಪ್ಲಾಟ್ ಫಾರಂ ಕೆಲಸಕ್ಕೆ ಹೆಚ್ಚುತ್ತಿರುವ ಬೇಡಿಕೆಗೆ ಪೂರಕವಾಗಿ ಈ ಒಪ್ಪಂದ ರೂಪಿಸಿಕೊಳ್ಳಲಾಗಿದೆ
● ಈ ಪ್ರಾರಂಭವು ಕಟ್ಟಡದ ಮಾಲೀಕರೊಂದಿಗೆ ಸಹಯೋಗದ ಒಪ್ಪಂದವನ್ನು ಅನುಸರಿಸುತ್ತಿದ್ದು ಅವರು ಇಂಟರ್ನ್ಯಾಷನಲ್ ವರ್ಕ್ ಪ್ಲೇಸ್ ಗ್ರೂಪ್ ಪ್ಲಾಟ್ ಫಾರಂನಲ್ಲಿ ಹೂಡಿಕೆ ಮಾಡಿ ಅವರ ಕಟ್ಟಡಕ್ಕೆ ಬ್ರಾಂಡೆಡ್ ಫ್ಲೆಕ್ಸಿಬಲ್ ವರ್ಕ್ ಪ್ಲೇಸ್ ಸೃಷ್ಟಿಸಲಿದ್ದಾರೆ
● ಈ ತಾಣವು ಇಂಟರ್ನ್ಯಾಷನಲ್ ವರ್ಕ್ ಪ್ಲೇಸ್ ಗ್ರೂಪ್ ಜಾಗತಿಕವಾಗಿ 2024ರಲ್ಲಿ 899 ಹೊಸ ತಾಣಗಳಿಗೆ ಸಹಿ ಹಾಕಿದ ಮತ್ತು ದಾಖಲೆಯ ಆದಾಯ, ಇಬಿಐಟಿಡಿಎ ಮತ್ತು ನಗದು ಉತ್ಪಾದಿಸಿದ ಸಂಸರ್ಭದಲ್ಲಿ ಬಂದಿದೆ
ಬೆಂಗಳೂರು: ಸ್ಪೇಸಸ್ ಮತ್ತು ರೀಗಸ್ ಬ್ರಾಂಡ್ ಗಳನ್ನು ಒಳಗೊಂಡ ವಿಶ್ವದ ಅತ್ಯಂತ ದೊಡ್ಡ ಹೈಬ್ರಿಡ್ ವರ್ಕ್ ಪ್ಲೇಸ್ ಪ್ಲಾಟ್ ಫಾರಂ ಇಂಟರ್ನ್ಯಾಷನಲ್ ವರ್ಕ್ ಪ್ಲೇಸ್ ಗ್ರೂಪ್ ಕರ್ನಾಟಕದ ಬೆಂಗಳೂರಿನಲ್ಲಿ ಅತ್ಯಾಧುನಿಕ ಅನುಕೂಲಕರ ಉದ್ಯೋಗದ ಸ್ಥಳವನ್ನು ಪ್ರಾರಂಭಿಸಿದೆ. ಹೆಚ್ಚು ಅನುಕೂಲಕರ ಕೆಲಸದ ವಿಧಾನಗಳಿಗೆ ದೀರ್ಘಾವಧಿಯಲ್ಲಿ ಬದಲಾವಣೆಯಾಗುತ್ತಿದ್ದು ಐ.ಡಬ್ಲ್ಯೂ.ಜಿ.ಯು ಎಲ್ಲ ಕಡೆಗಳಲ್ಲಿ ಅನುಕೂಲಕರ ಉದ್ಯೋಗದ ಸ್ಥಳಗಳಿಗೆ ಹೆಚ್ಚಾಗುತ್ತಿರುವ ಬೇಡಿಕೆಯನ್ನು ಪೂರೈಸಲು ತನ್ನ ಜಾಲವನ್ನು ವಿಸ್ತರಿಸುತ್ತಿದೆ. ಬೆಂಗಳೂರಿನಲ್ಲಿ ಇಂಟರ್ನ್ಯಾಷನಲ್ ವರ್ಕ್ ಪ್ಲೇಸ್ ಗ್ರೂಪ್ ನ ಹೊಚ್ಚಹೊಸ ತಾಣದ ಸೇರ್ಪಡೆಯು ಉದ್ಯಮಗಳು ಇತಿಹಾಸದಲ್ಲಿ ಹಿಂದೆಂದಿಗಿಂತ ಹೆಚ್ಚು ಆದಾಯ ಪ್ರಕಟಿಸುತ್ತಿದ್ದು, ನಗದು ಹರಿವು ಮತ್ತು ಗಳಿಕೆಗಳ ಪ್ರಗತಿಯನ್ನು ಕಂಡಿವೆ ಮತ್ತು ತೀವ್ರವಾದ ನೆಟ್ವರ್ ಪ್ರಗತಿ ಸಾಧಿಸುತ್ತಿದ್ದು ತನ್ನ ಜಾಲಕ್ಕೆ 2024ರಲ್ಲಿ 899 ಹೊಸ ಕೇಂದ್ರಗಳನ್ನು ಸೇರ್ಪಡೆ ಮಾಡಿಕೊಂಡಿದೆ ಮತ್ತು 624 ಹೊಸ ಉದ್ಯೋಗದ ಸ್ಥಳಗಳನ್ನು ತೆರೆಯುತ್ತಿದೆ.
ಬೆಂಗಳೂರಿನಲ್ಲಿ ರೀಗಸ್ ಕಛೇರಿಯ ಪ್ರಾರಂಭವು ಐ.ಡಬ್ಲ್ಯೂ.ಜಿ.ಗೆ ಮತ್ತೊಂದು ಮಹತ್ತರ ಮೈಲಿಗಲ್ಲಾಗಿದ್ದು ಇದು ಉದ್ಯಮಗಳು ಮತ್ತು ವ್ಯಕ್ತಿಗಳಿಗೆ ಆಧುನಿಕ ಉದ್ಯೋಗದ ಸ್ಥಳದ ಬೇಡಿಕೆಗಳಿಗೆ ರೂಪಿಸಲಾದ ಆವಿಷ್ಕಾರಕ ಉದ್ಯೋಗದ ಸ್ಥಳದ ಪರಿಹಾರಗಳನ್ನು ಒದಗಿಸಲು ತನ್ನ ಬದ್ಧತೆಯನ್ನು ಮರು ದೃಢೀಕರಿಸಿದೆ. ಲಾಂಗ್ ಫೋರ್ಡ್ ಗಾರ್ಡನ್ಸ್, ಲಾಂಗ್ ಫೋರ್ಡ್ ಟೌನ್ ನ ಓ ಶೌಘ್ನೆಸ್ಸೀ ರಸ್ತೆಯ ಗ್ಲೋಬಲ್ ಟೆಕ್ ಪಾರ್ಕ್ ನಲ್ಲಿರುವ ಈ ಹೊಸ ತಾಣವು ಇಂಟರ್ನ್ಯಾಷನಲ್ ವರ್ಕ್ ಪ್ಲೇಸ್ ಗ್ರೂಪ್ ಉಪಕ್ರಮದ ಭಾಗವಾಗಿದ್ದು ಈ ಪ್ರದೇಶದಲ್ಲಿ ಅನುಕೂಲಕರ ಉದ್ಯೋಗದ ಸ್ಥಳಕ್ಕೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುತ್ತದೆ.
ಕಟ್ಟಡದ ಮೊದಲ ಮಹಡಿಯು ಐಟಿ ಮತ್ತು ಐಟಿಇಎಸ್, ಟೆಲಿಕಾಂ, ಫಾರ್ಮಾ, ಬಯೋಟೆಕ್, ಟೆಕ್ಸ್ಟೈಲ್ಸ್, ಅಗ್ರಿಟೆಕ್, ಲಾಜಿಸ್ಟಿಕ್ಸ್ ಮತ್ತಿತರೆ ಪ್ರಮುಖ ಕಂಪನಿಗಳು ಮತ್ತು ಸ್ಟಾರ್ಟಪ್ ಗಳಿಗೆ ಸ್ಥಳ ನೀಡಿದೆ. ಈ ಹೊಸ ರೀಗಸ್ ತಾಣದಲ್ಲಿ ಖಾಸಗಿ ಕಛೇರಿಗಳು, ಮೀಟಿಂಗ್ ರೂಂಗಳು, ಕೋ-ವರ್ಕಿಂಗ್ ಮತ್ತು ಕ್ರಿಯೇಟಿವ್ ಸ್ಥಳಗಳಿವೆ. ವೃತ್ತಿಪರರು ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾದ ವೈವಿಧ್ಯಮಯ ಸ್ಥಳಗಳನ್ನು ಆನಂದಿಸಬಹುದು, ಅವರಿಗೆ ಅವರ ಆದ್ಯತೆಯ ಕೆಲಸದ ಶೈಲಿಗೆ ಅನುಗಣವಾಗಿ ಸೆಟಪ್ ಗಳಿಗೆ ಪ್ರವೇಶ ನೀಡುತ್ತದೆ. ಪೂರ್ಣ ಸುಸಜ್ಜಿತ ಕಛೇರಿಗಳು ಮತ್ತು ಕಿರಿದಾದ ಸಣ್ಣ ಕಛೇರಿಗಳಿಂದ ಬೇಕಾದಂತೆ ಬದಲಿಸಿಕೊಳ್ಳಬಲ್ಲ ಕೆಲಸದ ಸ್ಥಳಗಳು ಮತ್ತು ವಿಸ್ತಾರ ಸೂಟ್ ಎಲ್ಲವೂ ನೇರ ಪ್ರವೇಶಕ್ಕೆ ಉನ್ನತ ಗುಣಮಟ್ಟದ ಫರ್ನಿಷಿಂಗ್ಸ್ ಮತ್ತು ಸದೃಢ, ಸುರಕ್ಷಿತ ಐಟಿ ಮೂಲಸೌಕರ್ಯದೊಂದಿಗೆ ಸಜ್ಜಾಗಿವೆ.
ಕಟ್ಟಡದ ಮಾಲೀಕರು ಇಂಟರ್ನ್ಯಾಷನಲ್ ವರ್ಕ್ ಪ್ಲೇಸ್ ಗ್ರೂಪ್ ನಲ್ಲಿ ಅವರ ರಿಯಲ್ ಎಸ್ಟೇಟ್ ಸ್ಥಳದಿಂದ ಗರಿಷ್ಠ ಗಳಿಕೆ ಬರಲಿ ಎಂದು ಹೂಡಿಕೆ ಮಾಡಲು ನಿರ್ಧರಿಸಿದ್ದು ಅದಕ್ಕೆ ಪೂರಕವಾಗಿ ಹೈಬ್ರಿಡ್ ಕೆಲಸಕ್ಕೆ ತೀವ್ರವಾಗಿ ಹೆಚ್ಚುತ್ತಿರುವ ಬೇಡಿಕೆಯೂ ಕಾರಣವಾಗಿದೆ.
ಮುಂಚೂಣಿಯ ಶಿಕ್ಷಣ ತಜ್ಞರು ನಡೆಸಿದ ಸಂಶೋಧನೆಯಲ್ಲಿ ಉದ್ಯೋಗದ ಮಾದರಿಗಳಲ್ಲಿ ಅನುಕೂಲಕೆಯು ಉದ್ಯೋಗಿಗಳಿಗೆ ಹಲವು ಅನುಕೂಲಗಳನ್ನು ತರುತ್ತಿದ್ದು ಅದರಲ್ಲಿ ಉನ್ನತೀಕರಿಸಿದ ಉದ್ಯೋಗ-ಜೀವನದ ಸಮತೋಲನ, ಹಣಕಾಸು ಉಳಿತಾಯ ಮತ್ತು ಆರೋಗ್ಯದ ಅನುಕೂಲಗಳಿವೆ. ಉದ್ಯೋಗದಾತರು ಕೂಡಾ ಹೆಚ್ಚು ಸಂಸ್ಥೆಯ ಉತ್ಪಾದಕತೆ, ವೆಚ್ಚ ಉಳಿತಾಯ ಮತ್ತು ಹೆಚ್ಚು ದಕ್ಷ, ಸಕ್ರಿ ಉದ್ಯೋಗದ ಸ್ಥಳದ ಮೂಲಕ ಹೈಬ್ರಿಡ್ ಮಾದರಿಗಳ ಪ್ರಯೋಜನ ಪಡೆಯುತ್ತಾರೆ.
ಮಾರುಕಟ್ಟೆಯ ಪ್ರಗತಿ ತೀವ್ರಗತಿಯಲ್ಲಿರುವುದರಿಂದ ಎಲ್ಲ ಗಾತ್ರಗಳ ಕಂಪನಿಗಳೂ ದೀರ್ಘಾವಧಿಗೆ ಹೈಬ್ರಿಡ್ ಕೆಲಸದ ಮಾದರಿಯನ್ನು ಅಳವಡಿಸಿಕೊಳ್ಳುತ್ತಿದ್ದು ಇದು 2030ರ ವೇಳೆಗೆ ಶೇ.30ರಷ್ಟು ಎಲ್ಲ ವಾಣಿಜ್ಯ ರಿಯಲ್ ಎಸ್ಟೇಟ್ ಅನುಕೂಲಕರ ಉದ್ಯೋಗದ ಸ್ಥಳದ್ದಾಗಿರುತ್ತದೆ ಎಂದು ಅಂದಾಜಿಸಲಾಗಿದೆ. ಇಂಟರ್ನ್ಯಾಷನಲ್ ವರ್ಕ್ ಪ್ಲೇಸ್ ಗ್ರೂಪ್ ನೊಂದಿಗೆ ಪಾಲುದಾರರು ಈ ವೇಗವಾಗಿ ಬೆಳೆಯುತ್ತಿರುವ ವಲಯವನ್ನು ಬಳಸಿಕೊಳ್ಳಬಹುದು, ಅದಕ್ಕೆ ಇಂಟರ್ನ್ಯಾಷನಲ್ ವರ್ಕ್ ಪ್ಲೇಸ್ ಗ್ರೂಪ್ ನ ಸರಿಸಾಟಿ ಇರದ ಅನುಭವದ ಬೆಂಬಲವಿದೆ. ಹೈಬ್ರಿಡ್ ಕೆಲಸವು ಕಂಪನಿಗಳಿಗೆ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡಲಿದ್ದು ಪ್ರತಿ ಉದ್ಯೋಗಿಗೆ ಸರಾಸರಿ $11,000 ಉಳಿತಾಯ ಮಾಡುತ್ತದೆ.
ಇಂಟರ್ನ್ಯಾಷನಲ್ ವರ್ಕ್ ಪ್ಲೇಸ್ ಗ್ರೂಪ್ ಹೈಬ್ರಿಡ್ ಕೆಲಸದಲ್ಲಿ ಜಾಗತಿಕ ಮುಂಚೂಣಿಯಲ್ಲಿದ್ದು 120ಕ್ಕೂ ಹೆಚ್ಚು ದೇಶಗಳಲ್ಲಿ ಸಾವಿರಾರು ತಾಣಗಳಲ್ಲಿ ವಿಸ್ತರಿಸಿದ್ದು ಸದಸ್ಯರು ಐ.ಡಬ್ಲ್ಯೂ.ಜಿ. ಆಪ್ ಮೂಲಕ ಎಲ್ಲ ತಾಣಗಳನ್ನು ಬಳಸಬಹುದು ಮತ್ತು ವಾಣಿಜ್ಯ ಸೇವೆಗಳನ್ನೂ ಪಡೆಯಬಹುದು.
ಹೈಬ್ರಿಡ್ ಕೆಲಸಕ್ಕೆ ಪ್ರಸ್ತುತ ಆಗುತ್ತಿರುವ ಪರಿವರ್ತನೆಯು ಹೆಚ್ಚಾದಂತೆ ಮತ್ತಷ್ಟು ಬೆಳವಣಿಗೆಗೆ ಸಾಮರ್ಥ್ಯ ಅಪಾರವಾಗಿದ್ದು ಜಾಗತಿಕವಾಗಿ ಅಂದಾಜು 1.2 ಬಿಲಿಯನ್ ಬಿಳಿ ಪಟ್ಟಿಯ ಉದ್ಯೋಗಿಗಳು ಮತ್ತು ಒಟ್ಟು ಮಾರುಕಟ್ಟೆ $2 ಟ್ರಿಲಿಯನ್ ಮೀರಲಿದೆ. 2024ರಲ್ಲಿ ಇಂಟರ್ನ್ಯಾಷನಲ್ ವರ್ಕ್ ಪ್ಲೇಸ್ ಗ್ರೂಪ್ 899 ಹೊಸ ಪಾಲುದಾರ ತಾಣಗಳನ್ನು ಸ್ವಾಗತಿಸಿದೆ ಮತ್ತು ತನ್ನ ಗ್ರಾಹಕರಲ್ಲಿ 500 ಫಾರ್ಚೂನ್ 500 ಕಂಪನಿಗಳಲ್ಲಿ ಶೇ.83ರಷ್ಟಿವೆ.
ಇಂಟರ್ನ್ಯಾಷನಲ್ ವರ್ಕ್ ಪ್ಲೇಸ್ ಗ್ರೂಪ್ ಪಿ.ಎಲ್.ಸಿ.ಯ ಸಿಇಒ ಮತ್ತು ಸಂಸ್ಥಾಪಕ ಮಾರ್ಕ್ ಡಿಕ್ಸನ್, “ನಾವು ಈ ಹೊಚ್ಚಹೊಸ ಪ್ರಾರಂಭದಿಂದ ಕರ್ನಾಟಕದ ಬೆಂಗಳೂರಿನಲ್ಲಿ ಸದೃಢ ಮತ್ತು ಅತ್ಯಂತ ಅಗತ್ಯವಾದ ಹೆಜ್ಜೆ ಗುರುತನ್ನು ರೂಪಿಸುತ್ತಿದ್ದೇವೆ. ಪ್ರಮುಖ ಉದ್ಯಮ ಕೇಂದ್ರವಾಗಿ ಬೆಂಗಳೂರು ನಮಗೆ ನಮ್ಮ ವಿಸ್ತರಣೆಯ ಯೋಜನೆಗಳನ್ನು ವಿಸ್ತರಿಸಲು ಅದ್ಭುತ ಸ್ಥಳವಾಗಿದೆ. ನಾವು ರುರಬಿ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಜೊತೆಯಲ್ಲಿ ಹೊಸ ರೀಗಸ್ ಸೆಂಟರ್ ಅಭಿವೃದ್ಧಿಪಡಿಸಲು ಸಹಯೋಗದಲ್ಲಿ ಮ್ಯಾನೇಜ್ಮೆಂಟ್ ಒಪ್ಪಂದ ಅಡಿಯಲ್ಲಿ ಕೆಲಸ ಮಾಡಲು ಬಹಳ ಸಂತೋಷ ಹೊಂದಿದ್ದು ಇದು ಅವರ ಕಟ್ಟಡಕ್ಕೆ ಅತ್ಯಾಧುನಿಕ ಉದ್ಯೋಗದ ಸ್ಥಳ ಸೇರ್ಪಡೆ ಮಾಡುತ್ತದೆ”.
“ಬೆಂಗಳೂರಿನಲ್ಲಿ ನಮ್ಮ ಪ್ರಾರಂಭವು ಹೆಚ್ಚು ಹೆಚ್ಚು ಕಂಪನಿಗಳು ನಮ್ಯ ಹಾಗೂ ಪ್ಲಾಟ್ ಫಾರಂ ಕೆಲಸಕ್ಕೆ ಆದ್ಯತೆ ನೀಡುತ್ತಿರುವ ಸಮಯದಲ್ಲಿ ಬಂದಿದ್ದು ಅದು ಉದ್ಯೋಗಿಗಳಲ್ಲಿ ಅತ್ಯಂತ ಜನಪ್ರಿಯವಾಗಿದ್ದು ಅವರ ಉದ್ಯೋಗ-ಜೀವನದ ಸಮತೋಲನ ಮತ್ತು ಸಂತೃಪ್ತಿ ಸುಧಾರಿಸುತ್ತದೆ, ಅಲ್ಲದೆ ಕಂಪನಿಗಳಿಗೆ ಹಲವು ಅನುಕೂಲಗಳನ್ನು ನೀಡುತ್ತದೆ. ನಮ್ಮ ಉದ್ಯೋಗದ ಸ್ಥಳದ ಮಾದರಿಯು ಉತ್ಪಾದಕತೆ ಹೆಚ್ಚಿಸುವ ಪೂರ್ವ ಸಿದ್ಧ ಮಾದರಿಯಾಗಿದೆ ಮತ್ತು ಉದ್ಯಮಗಳಿಗೆ ಗಮನಾರ್ಹ ಕಡಿಮೆ ವೆಚ್ಚದಲ್ಲಿ ವಿಸ್ತರಿಸಿಕೊಳ್ಳಲು ಅಥವಾ ಕಡಿಮೆ ಮಾಡಿಕೊಳ್ಳಲು ನೆರವಾಗುತ್ತದೆ ಅಲ್ಲದೆ ಸಾವಿರಾರು ತಾಣಗಳ ಲಭ್ಯತೆ ನೀಡುತ್ತದೆ” ಎಂದರು.
ಐ.ಡಬ್ಲ್ಯೂ.ಜಿ.ಯ ಸೇಲ್ಸ್ ಕಂಟ್ರಿ ಮ್ಯಾನೇಜರ್ ಮತ್ತು ಉಪಾಧ್ಯಕ್ಷ ಹರ್ಷ ಲಂಬಾ, “ನಾವು ಭಾರತದ ಸಿಲಿಕಾನ್ ವ್ಯಾಲಿ ಎಂದು ಖ್ಯಾತಿ ಪಡೆದ ಬೆಂಗಳೂರಿನಲ್ಲಿ ನಮ್ಮ ಹೊಚ್ಚಹೊಸ ರೀಗಸ್ ಕೇಂದ್ರವನ್ನು ತೆರೆಯುವ ಮೂಲಕ ನಮ್ಮ ವಿಸ್ತರಣೆಯನ್ನು ಪ್ರಕಟಿಸಲು ಬಹಳ ಉತ್ಸುಕರಾಗಿದ್ದೇವೆ. ಬೆಂಗಳೂರು ನಮ್ಮ ಪ್ರಾದೇಶಿಕ ಪ್ರಗತಿಯ ಕಾರ್ಯತಂತ್ರದಲ್ಲಿ ಗಮನಾರ್ಹ ಹೆಜ್ಜೆಯಾಗಿದೆ. ಈ ಹೊಸ ಕೇಂದ್ರವು ಅಲ್ಪ ಅಥವಾ ದೀರ್ಘಕಾಲ ಬಾಡಿಗೆಗೆ ಪಡೆಯುವ ಕಛೇರಿ ಸ್ಥಳ ಮತ್ತು ಗ್ರಾಹಕರ ಬ್ರಾಂಡಿಂಗ್ ಮತ್ತು ಲೇಔಟ್ ಅಗತ್ಯಗಳಿಗೆ ತಕ್ಕಂತೆ ಹೊಂದಿಸಬೇಕಾದ ಅನುಕೂಲಕರ ಉದ್ಯೋಗದ ಸ್ಥಳಗಳ ಸೌಲಭ್ಯ ನೀಡುತ್ತದೆ. ಮುಂದೆ ನಾವು ಕರ್ನಾಟಕದ ಇತರೆ ನಗರಗಳಿಗೆ ವಿಸ್ತರಿಸುವ ಯೋಜನೆ ಹೊಂದಿದ್ದು ಇದರಿಂದ ಈ ಪ್ರದೇಶದಲ್ಲಿ ಐ.ಡಬ್ಲ್ಯೂ.ಜಿ.ಯ ವಿಸ್ತರಿಸುತ್ತಿರುವ ಹೆಜ್ಜೆ ಗುರುತನ್ನು ಮತ್ತಷ್ಟು ಸದೃಢಗೊಳಿಸಲಿದ್ದೇವೆ. ಸ್ಥಳೀಯ ಉದ್ಯಮಗಳು ಮತ್ತು ವ್ಯಕ್ತಿಗಳ ಪ್ರಗತಿ ಹಾಗೂ ಯಶಸ್ಸಿಗೆ ಅವರ ವಿಶೀಷ್ಟ ಅಗತ್ಯಗಳಿಗೆ ಪೂರಕವಾದ ಪ್ರಥಮ ದರ್ಜೆಯ ಉದ್ಯೋಗದ ಸ್ಥಳದ ಪರಿಹಾರಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ” ಎಂದರು.