ಸಮಾಜ ಬಾಂಧವರು ಒಗ್ಗಟ್ಟಿನಲ್ಲಿ ಕಾರ್ಯಕ್ರಮಕ್ಕೆ ಸಹಕಾರ ನೀಡಬೇಕು: ಆನಂದ ಕುಲಾಲ್ ಬಂಟ್ವಾಳ
ಮುಂಬಯಿ : ಕುಲಾಲ ಸಂಘ ಮುಂಬಯಿ ಇದರು ಚರ್ಚ್ ಗೇಟ್ ದಹಿಸರ್ ಸ್ಥಳೀಯ ಸಮಿತಿಯ ನವಂಬರ್ 29ರಂದು ನಡೆಯಲಿರುವ 9ನೇ
ವಾರ್ಷಿಕೋತ್ಸವ (ಸ್ನೇಹಕೂಟ) ಆಮಂತ್ರಣ ಪತ್ರಿಕೆ ಸೆ 27 ರಂದು ಗೋರರೆಗಾವ್ಂ ಪೂರ್ವದ ಶ್ರೀ ದುರ್ಗಾದೇವಿ ಮಂದಿರದಲ್ಲಿ ನಡೆದ ವಿಶೇಷ ಸಭೆಯಲ್ಲಿ ಸಮಿತಿಯ ಕಾರ್ಯಧ್ಯಕ್ಷ ಆನಂದ ಕುಲಾಲ್ ಬಂಟ್ವಾಳ ಬಿಡುಗಡೆ ಗೊಳಿಸಿದರು .

ಬಳಿಕ ಮಾತನಾಡಿದ ಆನಂದ ಕುಲಾಲ್ ಬಂಟ್ವಾಳ ದಿನಪೂರ್ತಿ ನಡೆಯಲ್ಲಿರುವ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು . ಸಮಾಜದ ಎಲ್ಲಾ ಪ್ರತಿಭಾವಂತರಿಂದ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲಿದ್ದಾರೆ ಎಂದು ನುಡಿದರು.
ಸಮಿತಿಯ ಕಾರ್ಯದರ್ಶಿ- ಸುಕುಮಾರ್ ಸಾಲಿಯಾನ್ ಮುಂಡ್ಕೂರು ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಕರುಣಾಕರ್ ಸಾಲಿಯನ್ ಕಾರ್ಯಕ್ರಮ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಸಮಿತಿ ಪದಾಧಿಕಾರಿಗಳು. ಮಹಿಳ ವಿಭಾಗದ ಉಪ ಕಾರ್ಯಾಧ್ಯಕ್ಷೆ ಆರತಿ ಕೆ ಸಾಲ್ಯಾನ್ ಪದಾಧಿಕಾರಿಗಳು ಯುವ ವಿಭಾಗದ ವಿನಯ್ ಸಾಲ್ಯಾನ್ ಹಾಗೂ ಪಾಲ್ಗೊಂಡಿದ್ದ ಸದಸ್ಯರು ಸಲಹೆ ಸೂಚನೆಗಳನ್ನು ನೀಡಿದರು.
ಸಮಿತಿಯ ಕೋಶಾಧಿಕಾರಿ ಮುಂಡಪ್ಪ ಮೂಲ್ಯ ಧನ್ಯವಾದಗಳು.

