“ಕತ್ತಲ ಹಾದಿ” ಕಿರುಚಿತ್ರ ಬಿಡುಗಡೆ

0
21

3 ಬ್ರದರ್ಸ್‌ ಕನ್ನಡ ಅರ್ಪಿಸುವ ’ಕತ್ತಲ ಹಾದಿ’ (KATTALA HAADI) ಕನ್ನಡ ಕಿರುಚಿತ್ರ ಬಿಡುಗಡೆಯಾಗಲಿದೆ. ವಿಭಿನ್ನ ಕಥಾಹಂದರದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿರುವ ಈ ಕಿರುಚಿತ್ರದ ಬಿಡುಗಡೆ ದಿನಾಂಕವನ್ನೂ ಚಿತ್ರತಂಡ ಪ್ರಕಟಿಸಿದೆ.

ಕಿರುಚಿತ್ರಕ್ಕೆ ಚೇತನ್ ರೈ ಪಾಣಾಜೆ ಅವರು ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಪವನ್ ರೈ ಪಾಣಾಜೆ ಸಹ ನಿರ್ದೇಶನ ಮಾಡಿದ್ದಾರೆ. ರಂಜನ್ ಇಂದಾಜೆ ಅವರು ಛಾಯಾಗ್ರಹಣ ಮತ್ತು ಸಂಕಲನ ನಿರ್ವಹಿಸಿದ್ದು, ಸಂಗೀತ ನಿರ್ದೇಶನವನ್ನು ಚೇತನ್ ರೈ ಅವರೇ ಮಾಡಿದ್ದಾರೆ.

ಚಿತ್ರದಲ್ಲಿ ದೀಪಕ್ ರೈ ಪಾಣಾಜೆ, ಅಕ್ಷತಾ ಕೀರ್ತನ್ ರೈ, ಸುದೇಶ್ ರೈ ಕೈಕಾರ, ಶಶಿಕುಮಾರ್ ರೈ, ಶ್ರೀಧರ್ ಪಡ್ರೆ , ವಿದ್ಯಾ, ಸಾತ್ವಿಕ್ ರೈ, ಕೃತಿಕ್ ರೈ, ಕಾರ್ತಿಕ್, ಹೃತೇಶ್, ರಕ್ಷಿತ್ ರೈ ,ಪವನ್, ಚಂದ್ರಶೇಖರ್,ಅವಿನಾಶ್, ಬ್ರಿಜೇಶ್ ರಾವ್, ಕಾಳಿದ್ ಪಾರ್ಪಲ ಸೇರಿದಂತೆ ಒಟ್ಟು 18 ಕಲಾವಿದರು ಅಭಿನಯಿಸಿದ್ದಾರೆ.

ಈಗಾಗಲೇ ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದ್ದು, ನವೆಂಬರ್ 7, 2026ರಂದು ಸಂಜೆ 4 ಗಂಟೆಗೆ 3 Brothers Kannada ಯೂಟ್ಯೂಬ್ ಚಾನೆಲ್‌ನಲ್ಲಿ ಕಿರುಚಿತ್ರ ಬಿಡುಗಡೆಯಾಗಲಿದೆ.