ಪರಾರಿ ಬೊಬ್ಬರ್ಯ ದೈವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶದ 48ನೇ ದಿನದ ಧಾರ್ಮಿಕ ಪೂಜೆಗಳು

0
107

ಪರಾರಿ ಬೊಬ್ಬರ್ಯ ದೈವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶದ 48ನೇ ದಿನದ ದೃಢ ಸಂಪ್ರೋಕ್ಷಣೆ ಪೂಜೆ, ಕಲಶಾಭಿಷೇಕ, ಪ್ರಸನ್ನ ಪೂಜೆ, ಹೋಮ, ಅನ್ನ ಸಂತರ್ಪಣೆ ಜೂ.7ರಂದು ನಡೆಯಿತು.
ಪ್ರಧಾನ ಅರ್ಚಕ ಲಕ್ಷ್ಮೀಶ ಭಟ್, ಗೌರವಾಧ್ಯಕ್ಷ ಸತೀಶ್ ಪೂಜಾರಿ ಕೀಳಂಜೆ, ಅಧ್ಯಕ್ಷ ಗುರುರಾಜ್ ಭಟ್ ಕೊಳಲಗಿರಿ ಇವರ ಮುಂದಾಳತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಜರುಗಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಜ್ಯೋತಿ ಕುಮಾರ್ ಪಾಟೀಲ್, ಕಾರ್ಯದರ್ಶಿ ಕೃಷ್ಣರಾಜ್ ಭಟ್, ಕೋಶಾಧಿಕಾರಿ ಸತೀಶ್ ನಾಯ್ಕ್ , ಪ್ರಮುಖರಾದ ಗಣೇಶ್ ನಾಯ್ಕ್ , ಸಮಿತಿಯ ಸರ್ವ ಸದಸ್ಯರು ಹಾಗೂ ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು. ವ್ಯಾಸರಾಜ್ ಭಟ್ ಹಾಗೂ ದಿನೇಶ್ ಭಟ್ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.

LEAVE A REPLY

Please enter your comment!
Please enter your name here